ಸಿದ್ದಾಪುರ, ಜು. ೨೮: ಅಮ್ಮತ್ತಿ ಒಂಟಿಯAಗಡಿ ಕೊಡವ ಸಂಸ್ಥೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಇಂದಿನ ಯುವ ಪೀಳಿಗೆಗೆ ಕೊಡುವ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಭಾಷೆಯ ಮಹತ್ವದ ಅರಿವು ಮೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕ ಪತ್ತಾಯದಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ನಡೆಸುವುದರಿಂದ ಸಮುದಾಯ ಬಾಂಧವರಿಗೆ ತಮ್ಮ ಸಂಸ್ಕೃತಿಯ ಮಹತ್ವದ ಅರಿವು ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಹು ಪುರಾತನವಾದ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಮಹತ್ತರವಾದ ಜವಾಬ್ದಾರಿ ಕೇವಲ ಅಕಾಡೆಮಿಗೆ ಮಾತ್ರವಲ್ಲದೆ ಜನಾಂಗದ ಪ್ರತಿಯೊಬ್ಬರಿಗೂ ಸಮಾನವಾಗಿ ಇರಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪ್ರಮುಖರಾದ ಕೋದಂಡ ಶಿವಣ್ಣಿ ಬೆಳ್ಯಪ್ಪ, ಮಂಡೇಪAಡ ರಾಬಿನ್ ಮಂದಪ್ಪ, ಮುಕ್ಕಾಟಿರ ಜಮುನಾ ಬೆಳ್ಳಿಯಪ್ಪ, ಮಚ್ಚಾರಂಡ ಕಿರಣ್, ಕೊಡವ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರರು ಹಾಜರಿದ್ದರು.