ಶನಿವಾರಸಂತೆ, ಜು. ೨೮: ಬೆಳೆಗಾರರ ಸಮಸ್ಯೆಗಳಿಗೆ ಯಾರೂ ಯಾವುದೇ ಸಂಘಟನೆಗಳಾಗಲಿ ಸಹಾಯಕ್ಕೆ ಬರುತ್ತಿಲ್ಲ. ಬೆಳೆಗಾರರೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಕೆಜಿಎಫ್‌ನ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರಸಂತೆಯ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಘದ ಸದಸ್ಯರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.ಆನೆ-ಮಾನವ ಸಂಘರ್ಷಕ್ಕೆ ಸರ್ಕಾರದಿಂದ ಶಾಶ್ವತ ಪರಿಹಾರವಿಲ್ಲ. ಸಂಘದ ಪ್ರಯತ್ನಕ್ಕೆ ಪ್ರತಿ ಸ್ಪಂದನೆ ಇಲ್ಲ.ಹೋರಾಟದ ಮೂಲಕ ರೈತರನ್ನು ಭೂ ಕಬಳಿಕೆಯಿಂದ ಪಾರು ಮಾಡಬೇಕು.ಕೆಜಿಎಫ್ ಸಂಘಟನಾ ಶಕ್ತಿ ಅಪಾರವಾಗಿದೆ.
ರಾಜ್ಯದಲ್ಲೂ ಕಾಫಿ ಮಂಡಳಿ ರಚಿಸಬೇಕು ಎಂದರು. ಕೆಜಿಎಫ್ ಕೊಡಗು ಜಿಲ್ಲಾ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್ ಮಾತನಾಡಿ, ಆನೆ-ಮಾನವ ಸಂಘರ್ಷ ಸ್ವಾತಂತ್ರ‍್ಯ ನಂತರದ ಸಮಸ್ಯೆಯಾಗಿದ್ದು ಈ ಸಂಘರ್ಷ ಇಂದು ಎಲ್ಲೆಡೆ ವ್ಯಾಪಿಸಿದೆ.ಇದರಲ್ಲಿ ಅರಣ್ಯ ಇಲಾಖೆ, ಮಾನವ, ಸರ್ಕಾರ ಬರುತ್ತದೆ.ಕಾರ್ಮಿಕರನ್ನು ಜೀವ ಭಯ ಕಾಡುತ್ತದೆ.ಒಂದು ಅರಣ್ಯದಿಂದ ಇನ್ನೊಂದು ಅರಣ್ಯಕ್ಕೆ ಸೇರಿಸುವಂತಿಲ್ಲ. ಆನೆಗಳನ್ನು ಪಳಗಿಸಬಹುದಾದರೂ ಕೊಡಗಿನಲ್ಲಿ ೧,೮೦೦ ಆನೆಗಳಿವೆ. ಕಾಫಿ ಬೆಳೆಗಾರರು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು ಸರ್ಫೆಸಿಯೂ ಸೇರಿ ಕೊಂಡಿದೆ ಎಂದರು
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ನಮ್ಮ ಬೆಳೆಗಾರ ಸ್ವಸಹಾಯ ಸಂಘದ ಅಧ್ಯಕ್ಷ ಎಸ್.ಎಂ.ಉಮಾಶAಕರ್ ಮಾತನಾಡಿ, ಸಂಘದಲ್ಲಿ ೨೬೦ ಮಂದಿ ಸದಸ್ಯರಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಬೆಳೆಗಾರರಿದ್ದಾರೆ.ಎಲ್ಲರೂ ಸದಸ್ಯತ್ವ ಪಡೆದುಕೊಂಡರೆ ಸ್ಥಳಾವಕಾಶ ದೊರೆತರೆ ಸ್ವಂತ ಕಟ್ಟಡ ನಿರ್ಮಾಣ ಮಾಡಬಹುದು ಎಂದರು. ಸಭೆಯಲ್ಲಿ ಆನೆ-ಮಾನವ ಸಂಘರ್ಷ ಹಾಗೂ ಸರ್ಫೆಸಿ ಬಗ್ಗೆ ಗಂಭೀರ ಚರ್ಚೆಗಳು ನಡೆದು ಬೆಳೆಗಾರರಾದ ದಿವಾಕರ್, ರಂಗಸ್ವಾಮಿ, ದೊಡ್ಡಪ್ಪ, ರಕ್ಷಿತ್, ಚಂದ್ರಕಾAತ್, ಧರ್ಮಪ್ಪ, ಚಂದ್ರಕಾAತ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸAಘದ ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ವಿ.ದಿವಾಕರ್, ಕಾರ್ಯದರ್ಶಿ ಎಸ್.ಸಿ.ಪುಟ್ಟಸ್ವಾಮಿ, ಖಜಾಂಚಿ ಟಿ.ಆರ್.ಕೇಶವ ಮೂರ್ತಿ, ನಿರ್ದೇಶಕರಾದ ಎಸ್.ಡಿ.ಬಸವರಾಜ್, ಎಂ.ಜೆ.ವಿನೋದ್ ಕುಮಾರ್, ಬಿ.ಎಸ್.ಪ್ರದೀಪ್, ಬಿ.ಎಸ್.ಪವನ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.ಆಡಳಿತ ಮಂಡಳಿಯ ವಾರ್ಷಿಕ ವರದಿ, ಕಳೆದ ಮಹಾಸಭೆಯ ನಡಾವಳಿಯನ್ನು ಮಂಡಿಸಲಾಯಿತು. ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕಾರ್ಯದರ್ಶಿ ಎಸ್.ಸಿ.ಪುಟ್ಟಸ್ವಾಮಿ ಸ್ವಾಗತಿಸಿ ವಂದಿಸಿದರು.