ಮಡಿಕೆÃರಿ, ಜು. ೨೭: ಕಡಗದಾಳು ಗ್ರಾ.ಪಂ.ಗೆ ಒಳಪಟ್ಟ ವಾರ್ಡ್ಗಳ ೨೦೨೬-೨೭ನೇ ಸಾಲಿನ ವಾರ್ಡ್ ಸಭೆಗಳು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸೀತಾಲಕ್ಷಿö್ಮ ಟಿ.ಎಸ್ ಅವರ ಅಧ್ಯಕ್ಷೆತಯಲ್ಲಿ ನಡೆಯಲಿದೆ.

ತಾ.೨೮ ರಂದು (ಇಂದು) ೧೧ ಗಂಟೆಗೆ ಪಂಚಾಯಿತಿ ಕಚೇರಿಯಲ್ಲಿ ಕಡಗದಾಳು ವಾರ್ಡ್ ಸಭೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಕತ್ತಲೆಕಾಡು ವಾರ್ಡ್ ಸಭೆ ಕ್ಲೋಸ್‌ಬರ್ನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ನೀರುಕೊಲ್ಲಿ ವಾರ್ಡ್ ಸಭೆ ತಾ.೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಬೋಯಿಕೇರಿ ವಾರ್ಡ್ ಸಭೆ ಮಧ್ಯಾಹ್ನ ೨ ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಕಡಗದಾಳು ಗ್ರಾಮಸಭೆ ತಾ.೩೧ ರಂದು ಬೆಳಿಗ್ಗೆ ೧೧ ಗಂಟೆಗೆ ಕಡಗದಾಳು ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.