ಮಡಿಕೇರಿ, ಜು. ೨೬: ಮಳೆಗಾಲದ ನಡುವೆ ಕೆಸರಿನಿಂದ ಕಂಗೊಳಿಸಿದ್ದ ಗದ್ದೆಯು ಸಂಭ್ರಮದ ಕ್ರೀಡಾಂಗಣವಾಗಿ ಮಾರ್ಪಟ್ಟಿತು. ಕೆಸರಿನ ಚಿಮ್ಮಾಟ, ಸ್ಪರ್ಧಾಳುಗಳ ಉತ್ಸಾಹದ ಓಟ, ಪ್ರೇಕ್ಷಕರ ಹರ್ಷೋದ್ಘಾರಗಳ ನಡುವೆ ನಡೆದ ವಿವಿಧ ಕೆಸರುಗದ್ದೆ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡಾ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸಿ, ಯುವಜನರಲ್ಲಿ ಸಾಹಸ ಹಾಗೂ ಸಾಂಪ್ರದಾಯಿಕ ಕ್ರೀಡೆಗಳ ಮೇಲಿನ ಅಭಿಮಾನವನ್ನು ಮತ್ತಷ್ಟು ಬಲಪಡಿಸಿದವು.
ಮಡಿಕೇರಿ ಸಮೀಪದ ತಾಳತ್ತಮನೆಯ ಫಾರ್ಮರ್ಸ್ ಕ್ಲಬ್ ವತಿಯಿಂದ ದ್ವಿತೀಯ ವರ್ಷದ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಮಲ್ಲನ ಬೆಳ್ಯಪ್ಪ ಅವರ ಗದ್ದೆಯಲ್ಲಿ ಸಂಭ್ರಮದಿAದ ನಡೆಯಿತು.
ವಿವಿಧೆಡೆಗಳಿಂದ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು ಕೂಡ ಕೆಸರುಗದ್ದೆಯಲ್ಲಿ ಮಿಂದೆAದ್ದು ವಿನೂತನ ಅನುಭವವನ್ನು ಪಡೆದುಕೊಂಡರು.
ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ವಾಲಿಬಾಲ್, ಕ್ರಿಕೆಟ್, ಓಟ, ಥ್ರೋಬಾಲ್ ಸೇರಿದಂತೆ ನಾನಾ ಬಗೆಯ ಆಟೋಟಗಳು ಗಮನ ಸೆಳೆದವು. ಗ್ರಾಮದ ನೂರಾರು ಸಾರ್ವಜನಿಕರು ಕ್ರೀಡಾಕೂಟವನ್ನು ಕಣ್ತುಂಬಿಕೊAಡರು.
ಗದ್ದೆ ಮಾಲೀಕ ಮಲ್ಲನ ಬೆಳ್ಯಪ್ಪ ಹಾಗೂ ಶ್ರೀ ದುರ್ಗಾ ಭಗವತಿ ದೇವಾಲಯದ ಅಧ್ಯಕ್ಷ ಚೆಟ್ಟೋಳಿರ ಗಿರೀಶ್ ಅಪ್ಪಯ್ಯ ಅವರುಗಳು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳೆಗಾರ ಚೆರಿಯಮನೆ ರಾಜ್‌ಕುಮಾರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಕೀಲರು, ಕಾಫಿ ಬೆಳೆಗಾರರಾದ ಮೂವೇರ ಶಂಭು ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಚೆರಿಯಮನೆ ಪೆಮ್ಮಯ್ಯ, ಕೃಷಿಕ ಮಲ್ಲನ ಉತ್ತಯ್ಯ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಿಬ್ಬಂದಿ ಕುಕ್ಕುನೂರು ರುಕ್ಮಿಣಿ, ಉದ್ಯಮಿ ಬಿದ್ರುಪಣೆ ಉಜ್ವಲ್ ಸೇರಿದಂತೆ ಫಾರ್ಮರ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.