ಕೋವರ್‌ಕೊಲ್ಲಿ ಇಂದ್ರೇಶ್

ಶಿಲ್ಲಾAಗ್, ಜು. ೨೫; ಮುಂದಿನ ೨೦೨೭ರಂದು ಶಿಲ್ಲಾಂಗ್‌ನಲ್ಲಿ ನಡೆಯಲಿರುವ ರಾಷ್ಟಿçÃಯ ಕ್ರೀಡಾಕೂಟಕ್ಕೆ ಮೇಘಾಲಯ ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಪೂರ್ವ ಸಿದ್ಧತೆಗಳನ್ನು ಆರಂಭಿಸಿದೆ. ಒಂದು ರಾಜ್ಯವು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಾಕಷ್ಟು ವಸತಿಯನ್ನು ನಿರ್ಮಿಸಿ, ಜನಸಂದಣಿ ಹೋದನಂತರವೂ ರಾಜ್ಯಕ್ಕೆ ಏನಾದರೂ ಅನುಕೂಲ ಕಲ್ಪಿಸಬಹುದು ಎಂಬುದನ್ನು ಸರ್ಕಾರ ದೇಶಕ್ಕೇ ತೋರಿಸಲು ಮುಂದಾಗಿದೆ.

ಉದ್ಯಮಿಗಳನ್ನು ಸೆಳೆಯಲು ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ರಾಜ್ಯಾದ್ಯಂತ ಹೋಂಸ್ಟೇಗಳಿಗೆ ಶೇಕಡಾ ೭೦ ರಷ್ಟು ಸಬ್ಸಿಡಿ ಬೆಂಬಲವನ್ನು ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯು ಏನನ್ನು ಒಳಗೊಂಡಿದೆ ಮತ್ತು ಅದು ಮೇಘಾಲಯದ ದೊಡ್ಡ ಪ್ರವಾಸೋದ್ಯಮ ಮಹತ್ವಾಕಾಂಕ್ಷೆಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ವಿವರ ಇಲ್ಲಿದೆ. ಸಾಮಾನ್ಯವಾಗಿ ಕೃಷಿ ಬೆಳೆಗೆ ಸಬ್ಸಿಡಿ ನೀಡಲಾಗುತ್ತದೆ. ಆದರೆ ರಾಜ್ಯವೊಂದು ಹೋಂ ಸ್ಟೇ ಸ್ಥಾಪನೆಗೆ ಸಬ್ಸಿಡಿ ಯೋಜನೆ ಪ್ರಕಟಿಸಿರುವುದು ದೇಶದಲ್ಲೇ ಮೊದಲಾಗಿದೆ.

ಯೋಜನೆಯ ಹಿಂದಿನ ಕಲ್ಪನೆ

ಮುಖ್ಯಮಂತ್ರಿಗಳ ಮೇಘಾಲಯ ಹೋಂಸ್ಟೇ ಮಿಷನ್ ಯೋಜನೆಯ ಭಾಗವಾಗಿ ರೂಪಿಸಲಾದ ಈ ಯೋಜನೆಯು, ರಾಷ್ಟಿçÃಯ ಕ್ರೀಡಾಕೂಟದ ಸಮಯದಲ್ಲಿ ಬೇಕಾಗುವ ಸಾವಿರಾರು ವಸತಿ ವ್ಯವಸ್ಥೆಗಳಿಗೆ ಹೋಂಸ್ಟೇಗಳನ್ನು ನಿರ್ಮಿಸಲು ಅಥವಾ ನವೀಕರಿಸಲು ಕೋರಿದೆ. ಕ್ರೀಡಾಕೂಟ ಮುಗಿದ ನಂತರ, ಮಾಲೀಕರು ಈ ಆಸ್ತಿಗಳನ್ನು ಇಟ್ಟುಕೊಂಡು ಅವುಗಳನ್ನು ಸಾಮಾನ್ಯ ಹೋಂಸ್ಟೇಗಳಾಗಿ ನಡೆಸಬಹುದಾಗಿದೆ. ಸಂಗ್ಮಾ ಇದನ್ನು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಯೋಜನೆ ಎನ್ನುತ್ತಾರೆ. ಇದು ದೀರ್ಘಕಾಲೀನ, ಸಮುದಾಯ ಸ್ವಾಮ್ಯದ ಪ್ರವಾಸೋದ್ಯಮ ವ್ಯವಹಾರಗಳನ್ನು ನಡೆಸಲು ತಾತ್ಕಾಲಿಕ ವಸತಿ ಬಿಕ್ಕಟ್ಟನ್ನು ಪರಿಹರಿಸುತ್ತದೆ. “ಈ ನವೀನ ವಿಧಾನವು ವಸತಿ ಸವಾಲುಗಳನ್ನು ಪರಿಹರಿಸುವುದಲ್ಲದೆ, ನಮ್ಮ ಜನರಿಗೆ ಉದ್ಯಮಶೀಲತೆ ಮತ್ತು ಜೀವನೋಪಾಯವನ್ನು ಸೃಷ್ಟಿಸುತ್ತದೆ” ಎಂದು ಅವರು ಹೇಳಿದ್ದಾರೆ. ವಿವಿಧ ರೀತಿಯ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ರಾಜ್ಯಕ್ಕೆ ಪಂಚತಾರಾ ಹೊಟೆಲ್‌ಗಳು ಮತ್ತು ತಳಮಟ್ಟದ ಹೋಂಸ್ಟೇಗಳು ಎರಡೂ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ

ಹೋಂ ಸ್ಟೇಯ ಯೋಜನಾ ವೆಚ್ಚದ ೭೦% ಬೆಂಬಲ, ವಿಶೇಷಚೇತನ ಅರ್ಜಿದಾರರಿಗೆ ೮೦%

ರಾಜ್ಯ ಸರ್ಕಾರ ಪ್ರಕಟಿಸಿರುವ ಈ ಯೋಜನೆಯು ಹೊಸ ಹೋಂ ಸ್ಟೇ ನಿರ್ಮಿಸುವವರಿಗೆ ಮಾತ್ರ ಸೀಮಿತವಾಗಿಲ್ಲ. ಈಗಾಗಲೇ ಹೋಂ ಸ್ಟೇ ಹೊಂದಿರುವ ಮಾಲೀಕರು ಅವುಗಳನ್ನು ನವೀಕರಿಸಲು ಬಯಸಿದರೆ ಅವರಿಗೂ ಎರಡು ಲಕ್ಷ ರೂಪಾಯಿಗಳವರೆಗೆ ಅನುದಾನ ನೀಡಲಾಗುತ್ತದೆ. ಹೋಂ ಸ್ಟೇ ಮಾಲೀಕರಿಗೆ ನವೀಕರಣಕ್ಕಾಗಿ ಪ್ರತಿ ಕೋಣೆಗೆ ರೂ. ೫೦,೦೦೦ ಅನುದಾನ ನೀಡಲಾಗುತ್ತಿದ್ದು ಇದು ನಾಲ್ಕು ಕೋಣೆಗಳಿಗೆ ಸೀಮಿತವಾಗಿದೆ. ಮೇಘಾಲಯ ಗ್ರಾಮೀಣ ಬ್ಯಾಂಕ್ ಸೇರಿದಂತೆ ಪಾಲುದಾರ ಬ್ಯಾಂಕುಗಳ ಮೂಲಕ ಯಾವುದೇ ಆಧಾರವಿಲ್ಲದೆ ಹಾಲಿ ಹೋಂ ಸ್ಟೇಗಳಿಗೆ ಸಾಲವನ್ನೂ ನೀಡಲಾಗುತ್ತದೆ ಮತ್ತು ಈ ಸಾಲಕ್ಕೆ ಒಂದು ವರ್ಷದವರೆಗೆ ಕಂತು ಕಟ್ಟಲು ಬಿಡುವು ಇರುತ್ತದೆ. ೧೨ ತಿಂಗಳ ನಂತರ ಇಎಂಐ ಪಾವತಿಸಬೇಕಿದ್ದು ಸಬ್ಸಿಡಿ ಹಣವನ್ನು ಎರಡು ವರ್ಷಗಳವರೆಗೆ ಪ್ರತೀ ತಿಂಗಳೂ ಸಾಲದ ಕಂತಿಗೆ ಜಮಾ ಮಾಡಲಾಗುತ್ತದೆ.

ಸಂಸ್ಥೆಗಳಿAದ ಉಚಿತವಾಗಿ ವಾಸ್ತುಶಿಲ್ಪ ಮತ್ತು ವಿನ್ಯಾಸ ಸಹಾಯ

ಆಸಕ್ತರಿಗೆ ಮೇಘಾಲಯ ರಾಜ್ಯ ಕೌಶಲ್ಯ ಅಭಿವೃದ್ಧಿ ಸೊಸೈಟಿ ವತಿಯಿಂದ ಉಚಿತವಾಗಿ ಮನೆಕೆಲಸ, ಅಡುಗೆ ಮತ್ತು ಆತಿಥ್ಯ ಮಾರ್ಕೆಟಿಂಗ್‌ನAತಹ ಕ್ಷೇತ್ರಗಳಲ್ಲಿ ತರಬೇತಿ, ಜೊತೆಗೆ ಅತ್ಯುತ್ತಮ ಪ್ರದರ್ಶಕರಿಗೆ ಪ್ರವಾಸಗಳನ್ನೂ ಆಯೋಜಿಸಲಾಗಿದೆ. ಪೀಠೋಪಕರಣಗಳು ಮತ್ತು ಸೌರ ಫಲಕ ಸ್ಥಾಪನೆಗಾಗಿ ಪ್ರತಿ ಆಸ್ತಿಗೆ ರೂ. ೧ ಲಕ್ಷದವರೆಗೂ ಸಬ್ಸಿಡಿ ನೀಡಲಾಗುತ್ತದೆ. ಹೋಂ ಸ್ಟೇ ಮಾರ್ಕೆಟಿಂಗ್‌ಗಾಗಿ ಬುಕ್ಕಿಂಗ್ ಮತ್ತು ಗೋಚರತೆಗಾಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ರಾಜ್ಯದ ಡಿಜಿಟಲ್ ಪ್ರವಾಸೋದ್ಯಮ ವೇದಿಕೆಗಳು, ಒ-ಖಿIಒಇ ಪೋರ್ಟಲ್ ಮತ್ತು ಮೇಘಾಲಯ ಪ್ರವಾಸಿ ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡಲಾಗುತ್ತಿದೆ.

ಯಾರು ಅರ್ಜಿ ಸಲ್ಲಿಸಬಹುದು

ಈ ಯೋಜನೆಯು ಅರ್ಜಿದಾರರನ್ನು ಎರಡು ಭಾಗವಾಗಿ ವಿಂಗಡಿಸುತ್ತದೆ, ಯಾರಾದರೂ ಹೊಸ ಹೋಂಸ್ಟೇ ನಿರ್ಮಿಸುತ್ತಿದ್ದರೆ, ಅವರು ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ಹೊಂದಿರಬೇಕು. ಅಥವಾ ಕನಿಷ್ಟ ೭ ವರ್ಷಗಳ ಕಾಲ ಭೂಮಿಯನ್ನು ಗುತ್ತಿಗೆ ಪಡೆದಿರುವ ದಾಖಲೆ ನೋಂದಣಿ ಆಗಿರಬೇಕಾಗುತ್ತದೆ. ಇವರು ಮೇಘಾಲಯ ಪ್ರವಾಸೋದ್ಯಮ ಇಲಾಖೆಯು ರೂಪಿಸಿರುವ ೩೩ ಪೂರ್ವ-ಅನುಮೋದಿತ ವಿನ್ಯಾಸಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಸ್ತಿಯನ್ನು ಅಪ್‌ಗ್ರೇಡ್ ಮಾಡಲು ಬಯಸುವ ಹೋಂ ಸ್ಟೇ ಮಾಲೀಕರು ಕನಿಷ್ಟ ಆರು ತಿಂಗಳ ಚಾಲನೆಯಲ್ಲಿರುವ ಇತಿಹಾಸ ಮತ್ತು ಕನಿಷ್ಟ ೫೦ ರಾತ್ರಿ ಅತಿಥಿಗಳನ್ನು ಉಳಿಸಿಕೊಂಡಿರುವ ಬಗ್ಗೆ ದಾಖಲೆ ನೀಡಬೇಕು.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್

ಮೊದಲ ಬಾರಿಗೆ ಅರ್ಜಿದಾರರು ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ, ಗುರುತಿನ ದಾಖಲೆ, ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿಯನ್ನು ಆರಿಸುವ ಮೂಲಕ ಮತ್ತು ಅರ್ಜಿ ನಮೂನೆಗೆ ಹೋಗಲು ಮತ್ತು ನಂತರ “ಮುಂದೆ” ಕ್ಲಿಕ್ ಮಾಡುವ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸುವ ಮೂಲಕ ಸದಸ್ಯ ಐಡಿಗಾಗಿ ನೋಂದಾಯಿಸಿಕೊಳ್ಳಬೇಕು.

ನೋಂದಣಿ ಮಾಡಿದ ನಂತರ, ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಸದಸ್ಯ ಗುರುತಿನ ಚೀಟಿಯನ್ನು ಬಳಸಿಕೊಂಡು ಸೈನ್ ಇನ್ ಮಾಡಿ, “ಸೇವೆಗಳು/ಯೋಜನೆಗಾಗಿ ಅರ್ಜಿ ಸಲ್ಲಿಸಿ” ವಿಭಾಗಕ್ಕೆ ನ್ಯಾವಿಗೇಟ್ ಮಾಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ ಮತ್ತು ಪರಿಶೀಲನೆಗೆ ಸಲ್ಲಿಸಬೇಕು.

ಒಟ್ಟು ಸಿಗುವ ಸಬ್ಸಿಡಿ ಎಷ್ಟು ಗೊತ್ತೇ ?