ಸಿದ್ದಾಪುರ, ಜು. ೨೬: ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನು ಕೊಲ್ಲಿ ಶಾಖೆ ವ್ಯಾಪ್ತಿಯ ಚೆಟ್ಟಳ್ಳಿ ಸಮೀಪದ ಈರಳೆವಳಮುಡಿ ಚೇರಳ ಶ್ರೀಮಂಗಲ, ಹೊರೂರು, ಕೂಡ್ಲೂರು ಚೆಟ್ಟಳ್ಳಿ, ಕಂಡಕೆರೆ, ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರÀಣೆ ಕಳೆದೆರಡು ದಿನಗಳಿಂದ ನಡೆಯಿತು.

ಮಳೆ ನಡುವೆ ಕಾರ್ಯಾಚರಣೆ ನಡೆಸುವ ಸಂದರ್ಭ ೫ ಕಾಡಾನೆಗಳು ಕಂಡುಬAದಿದೆ ಎಂದು ಕಾರ್ಯಾಚರಣೆ ತಂಡದ ಅಧಿಕಾರಿ ತಿಳಿಸಿದರು. ಗುಂಪಿನಲ್ಲಿ ಬೇರ್ಪಟ್ಟಿದ್ದ ಕಾಡಾನೆಗಳಲ್ಲದೆ ಕಂಡಕೆರೆಯಲ್ಲಿ ಕಾರ್ಯಾಚರಣೆ ಸಂದರ್ಭ ಒಂಟಿ ಸಲಗ ಕಾರ್ಯಾಚರಣೆ ತಂಡಕ್ಕೆ ಕಂಡುಬAತು. ಈ ಸಲಗವು ಕಾಫಿ ತೋಟದಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕಿತಲ್ಲದೆ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿದ ಘಟನೆಯೂ ನಡೆಯಿತು.

ಬಳಿಕ ಕಾರ್ಯಾಚರಣೆ ತಂಡ ಶ್ರಮವಹಿಸಿ ಎಲ್ಲಾ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತು. ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಆರ್‌ಆರ್‌ಟಿ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- ವಾಸು