ವೀರಾಜಪೇಟೆ, ಜು. ೨೬: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೃಷಿ ಯಂತ್ರೋಪಕರಣ ಮಾರಾಟ ಮಳಿಗೆಯ ಕಾಂಪೌAಡ್‌ಗೆ ಡಿಕ್ಕಿ ಹೊಡೆದು, ಕಲ್ಯಾಣಿ ಮೋಟಾರ್ಸ್ನ ಬೋರ್ಡ್ಗೆ ಹಾನಿ ಮಾಡಿರುವ ಘಟನೆ ವೀರಾಜಪೇಟೆ ನಗರದ ಪಂಜರಪೇಟೆ ಬಳಿ ನಡೆದಿದೆ. ಕಾರು ಚಾಲಕ ಖಾಸಗಿ ರೆಸಾರ್ಟ್ನ ಉದ್ಯೋಗಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗಾಗಿ ಕೇರಳದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಈ ವೇಳೆ ಅಂಗಡಿಯ ಬಳಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.