ಚೆಯ್ಯಂಡಾಣೆ, ಜು. ೨೬: ಸ್ಥಳೀಯ ನರಿಯಂದಡ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿ ಮಿತಿಮೀರಿದ್ದು, ಭತ್ತ ಬೆಳೆಯುವ ಗದ್ದೆ, ತೋಟಗಳಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತಿದ್ದು, ಇಲ್ಲಿನ ಗ್ರಾಮಸ್ಥರು ಕಾಡಾನೆ ದಾಳಿ ಮಾಡುತ್ತಿರುವ ಗದ್ದೆಯಲ್ಲೇ ನಾಟಿ ಮಾಡಿ ವಿಶೇಷತೆ ಮೆರೆದಿದ್ದಾರೆ.

ಪೊಕ್ಕುಳಂಡ್ರ ಧನೋಜ್ ಕುಮಾರ್ ಅÀವರ ಒಟ್ಟು ೪ ಏಕರೆಯ ೬ ಗದ್ದೆಯಲ್ಲಿ ೧೨ ಜನ ಹಾಡು ಹಾಡುತ್ತಾ, ಕುಣಿಯುತ್ತಾ ಬಿರುಸಿನ ಮಳೆಯ ನಡುವೆಯೂ ಭತ್ತ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಕಳೆದ ವರ್ಷ ಕೂಡ ಇದೇ ಗದ್ದೆಯಲ್ಲಿ ನಾಟಿ ಮಾಡಿದ್ದನ್ನು ಕಾಡಾನೆ ತುಳಿದು ನಾಶ ಪಡಿಸಿತ್ತು. ಈ ವರ್ಷ ಕಾಡಾನೆ ಹಾವಳಿ ಇದ್ದರೂ ಕೂಡ ಗದ್ದೆಗಳಲ್ಲಿ ಭತ್ತದ ನಾಟಿ ಮಾಡಿದ್ದೇವೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಮಳೆ, ಗಾಳಿ, ಕಾಡಾನೆ ಹಾವಳಿ ಯಾವುದನ್ನು ಲೆಕ್ಕಿಸದೆ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಕೆಲಸ ಮಾಡಿದ್ದೇವೆ.

ಅರಣ್ಯ ಇಲಾಖೆ ಇನ್ನಾದರೂ ಭತ್ತದ ನಾಟಿ ಮಾಡಿದ ಗದ್ದೆಯನ್ನು ಕಾಡಾನೆಗಳು ತುಳಿಯದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು; ತುಳಿದರೆ ಕಷ್ಟಪಟ್ಟು ಮಾಡಿದ ಬೆಳೆಗಳೆಲ್ಲ ನಾಶವಾಗಲಿದೆ. ಮುಂದಿನ ದಿನಗಳಲ್ಲಿ ಅಲ್ಪ ಸ್ವಲ್ಪ ಭತ್ತ ಬೆಳೆಯುವ ಈ ವ್ಯಾಪ್ತಿಯ ರೈತರು ಕೂಡ ಭತ್ತ ಕೃಷಿ ಮಾಡಲು ಹಿಂದೇಟು ಹಾಕಿದರೆ ಮುಂದಿನ ತಲೆಮಾರಿಗೆ ಭತ್ತದ ಕೃಷಿಯ ಬಗ್ಗೆ ಅರಿವು ಇಲ್ಲದಂತಾಗುವುದರಲ್ಲಿ ಸಂಶಯವಿಲ್ಲ.

ಒಂದೆಡೆ ಗದ್ದೆಯಲ್ಲಿ ರೈತರು ನಾಟಿ ಮಾಡುತ್ತಿದ್ದರೆ ಮತ್ತೋಂದೆಡೆ ತೋಟದಲ್ಲಿ ಕಾಡಾನೆ ಲೂಟಿ ಮಾಡುತ್ತಿದೆ. ಬೆಳಿಯಂಡ್ರ ವೇಣುಗೋಪಾಲ್, ಬಟ್ಟಿಯಂಡ ದಿ. ಸಾಬು ಬೆಳ್ಯಪ್ಪ ಹಾಗೂ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಕಾಫಿ, ಅಡಿಕೆ, ಬಾಳೆ, ತೆಂಗು ಗಿಡಗಳನ್ನು ತುಳಿದು ನಾಶಪಡಿಸಿದ್ದು ಆನೆಗಳು ತೋಟದಲ್ಲೇ ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಪ್ರಯತ್ನ ಪಡುತ್ತಿದ್ದಾರೆ. ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆAದು ಗ್ರಾಮಸ್ಥರು ಆಗ್ರಹಿಸಿದ್ದಾರೆ. - ಅಶ್ರಫ್