ಮಡಿಕೇರಿ, ಜು. ೨೬: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಈ ಬಾರಿಯ ಡಿಜಿ ಮತ್ತು ಐಜಿಪಿ ಕಮಂಡೇಷನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾಗಿರುವ ಕೊಡಗು ಜಿಲ್ಲೆಯ ಮೂವರು ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರಿನ ಕೋರಮಂಗಲದ ಕೆಎಸ್‌ಆರ್‌ಪಿ ೩ನೇ ಬೆಟಾಲಿಯನ್‌ನಲ್ಲಿ ನಡೆದ ಸಮಾರಂಭದಲ್ಲಿ ಸಿದ್ದಾಪುರ ಠಾಣಾಧಿಕಾರಿಯಾಗಿರುವ ಮಂಜುನಾಥ್, ಡಿಎಆರ್‌ನ ಎಆರ್‌ಎಸ್‌ಐ ಜಿತೇಂದ್ರ ರೈ ಹಾಗೂ ಎಸ್‌ಪಿ ಕಚೇರಿಯಲ್ಲಿ ಕಂಪ್ಯೂಟರ್ ಸೆಕ್ಷನ್‌ನಲ್ಲಿರುವ ತಿಮ್ಮಯ್ಯ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.