ಮಡಿಕೇರಿ, ಜು. ೨೫: ಅಖಿಲ ಕೊಡವ ಸಮಾಜದ ವತಿಯಿಂದ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಮಲ್ಮ ಬೆಟ್ಟದ ಸ್ಥಿರಾಸ್ತಿಗಳ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪಾಲ್ಗೊಂಡಿದ್ದರು. ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ಜಾಗವನ್ನು ಅಖಿಲ ಕೊಡವ ಸಮಾಜ ಖರೀದಿಸಲು ತಮ್ಮ ಸಂಸ್ಥೆಯಿAದ ಅಗತ್ಯವಾದ ಸದ್ಯದ ಮಟ್ಟಿಗಿನ ಹಣಕಾಸು ಒದಗಿಸುವ ಭರವಸೆ ನೀಡಿದರು.

ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ನೆಲಜಿ ಬಲ್ಲಮಾವಟ್ಟಿ ಗ್ರಾಮದ ಪ್ರದೇಶಗಳು ಕೊಡವ ಸಂಸ್ಕೃತಿಯ ಅನನ್ಯ ಪ್ರಾಚೀನ ನೆಲೆಬೀಡುಗಳಾಗಿವೆ ಎಂದರು. ಅ.ಕೊ.ಸ. ಕಾರ್ಯಕಾರಿ ಮಂಡಳಿಯ ಸದಸ್ಯರುಗಳು, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ನೆಲಜಿ, ಪೇರೂರು, ಬಲ್ಲಮಾವಟಿಯ ನೆಲಜಿ ಮಲ್ಮ ಹಿತರಕ್ಷಣ ಸಮಿತಿಯ ಪ್ರಮುಖರು ಹಾಗೂ ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ, ನೆಲಜಿ ಇಗ್ಗುತ್ತಪ್ಪ ಮಲ್ಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಉಪಾಧ್ಯಕ್ಷ ಕೈಬುಲಿರ ಸಾಬು ಗಣಪತಿ,ಕಾರ್ಯದರ್ಶಿ ಮಂಡಿರ ಸಚಿನ್ ಗಣಪತಿ, ಸಹ ಕಾರ್ಯದರ್ಶಿ ಕೈಬುಲಿರ ದಿನು ಕಾವೇರಪ್ಪ, ಮಾಳೆಯಂಡ ಜಗದ ಈರಪ್ಪ, ಮಾಳೆಯಂಡ ವಿಜು ಅಪ್ಪಚ್ಚ, ಮಣವಟ್ಟಿರ ಅರುಣ್ ಪಳಂಗಪ್ಪ, ಚಿಯಕಪೂವಂಡ ಸುನಿಲ್, ಮಂಡಿರ ರಿಪ್ಪನ್, ಬಾಳೆಯಡ ಲವ ಬೆಳ್ಯಪ್ಪ, ಬಾಳೆಯಡ ಲಸ, ಅಪ್ಪುಮಣಿಯಂಡ ಕಿಶು ಮೇದಪ್ಪ, ಮುಂಡAಡ ರಂಜನ್, ಮತ್ತು ಹಲವು ಕೊಡವ ಸಮಾಜದ ಅಧ್ಯಕ್ಷರುಗಳ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿದ ಬಳಿಕ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಸೂಚನೆಯನ್ನು ಸರ್ವಾನುಮತದಿಂದ ಸಭೆಯು ಅಂಗೀಕರಿಸಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿತು. ನೆಲಜಿಯ ೭೧.೯೨ ಎಕರೆ ಸ್ಥಿರಾಸ್ತಿಗಳ ಖರೀದಿಗಾಗಿ ಶೀಘ್ರದಲ್ಲಿಯೇ ಶ್ರೀ ಎಂ. ಅವರೊಂದಿಗೆ ಅಗತ್ಯ ಅಗ್ರಿಮೆಂಟ್ ಮಾಡುವುದು.

ಜನಾಂಗದ ಉನ್ನತ ಸಂಸ್ಥೆಯಾದ ಅಖಿಲ ಕೊಡವ ಸಮಾಜವು ಶ್ರೀ ಎಂ. ಅÀವರು ಮಾರಾಟ ಮಾಡುವ ಆಸ್ತಿಗಳನ್ನು ಮತ್ತಷ್ಟು ಸುಧಾರಿತ ಬೆಲೆಗೆ ಹೊಂದಿಕೊಳ್ಳುವ ಸಲುವಾಗಿ ಮಾರಾಟ ಮಾಡಿರುವ, ಅವರೊಂದಿಗೆ ಉತ್ತಮ ಸಂಬAಧ ಹೊಂದಿರುವ ಮುಕ್ಕಾಟಿರ ಎಂ.ಜಯ ಅವರು, ಸಹಕರಿಸುವಂತೆ ಕೋರಿರುವುದಕ್ಕೆ ಮುಕ್ಕಾಟಿರ ಜಯ ಅವರು ಸಮ್ಮತಿಸಿದ್ದರು. ಆದಾಯ ತೆರಿಗೆ ವಿನಾಯಿತಿ ಲಭ್ಯತೆಯವರೆಗೆ - ಕಾನೂನಿನಡಿ ಲಭ್ಯವಿರುವ ಆದಾಯ ತೆರಿಗೆ ವಿನಾಯಿತಿ ಸಿಗುವವರೆಗೆ, ಖರೀದಿಗೆ ಅಗತ್ಯವಿರುವ ಹಣಕಾಸಿಗೆ ಜನಾಂಗದ ಪ್ರಮುಖರಿಂದ ಸಾಲದ ವ್ಯವಸ್ಥೆ ಮಾಡುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಕೇಂದ್ರೀಯ ಸಮಿತಿಯ ಸದಸ್ಯರು, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಹಾಗೂ ನೆಲಜಿ ಇಗ್ಗುತಪ್ಪ ದೇವಳದ ಅಧ್ಯಕ್ಷ ಮುಂಡAಡ ನಾಣಯ್ಯ ಅವರುಗಳು ಮಾತನಾಡಿದರು. ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಪೊರೇರ ಬಿದ್ದಪ್ಪ ವಂದಿಸಿದರು.