ಚೆಯ್ಯಂಡಾಣೆ, ಜು. ೨೪: ವೀರಾಜಪೇಟೆಯ ಪ್ರಗತಿ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಮಾತನಾಡಿ, ಹೊಸ ವಿದ್ಯಾರ್ಥಿ ನಾಯಕರಿಗೆ ಅಧಿಕಾರ ಹಾಗೂ ಜವಾಬ್ದಾರಿಗಳನ್ನು ಅಧಿಕೃತವಾಗಿ ಹಸ್ತಾಂತರಿಸುವ ಈ ಸಮಾರಂಭವು ಕೇವಲ ಹುದ್ದೆ ನೀಡುವ ಕಾರ್ಯಕ್ರಮವಲ್ಲ. ನಾಯಕತ್ವ, ಕರ್ತವ್ಯ ಪ್ರಜ್ಞೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಪ್ರೌಢಶಾಲೆಯ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಜುಲಾನಿ, ವಿದ್ಯಾರ್ಥಿನಿ ನಾಯಕಿಯಾಗಿ ಆರ್ಯಾ ಎಂ.ಜೆ., ಉಪ ನಾಯಕನಾಗಿ ಜೋಯೆಲ್ ಜಾರ್ಜ್ ಎ.ಎ., ಉಪ ನಾಯಕಿಯಾಗಿ ರಿದ್ಹಾ ಫಾತಿಮಾ ವಿ.ಪಿ., ಕ್ರೀಡಾ ನಾಯಕನಾಗಿ ಯಶಸ್ ಗೌಡ ಬಿ.ಕೆ., ಶಿಸ್ತು ನಾಯಕನಾಗಿ ಲಿಕಿತ್ ವಿ.ಎ., ಸಾಂಸ್ಕೃತಿಕ ನಾಯಕರಾಗಿ ಗಾಯನ್ ಹಾಗೂ ತನಯ್ ಬಿ.ಎಸ್. ಅಧಿಕಾರ ಸ್ವೀಕರಿಸಿದರು.
ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನಾಗಿ ರಿತ್ವಿಕ್ ಕೆ.ವಿ., ವಿದ್ಯಾರ್ಥಿನಿ ನಾಯಕಿಯಾಗಿ ರಿಫಾ ಫಾತಿಮಾ ಎಂ.ಎನ್., ಕ್ರೀಡಾ ನಾಯಕನಾಗಿ ಧನಿಷ್ ವಿ.ಎಸ್., ಶಿಸ್ತು ನಾಯಕಿಯಾಗಿ ತೀಕ್ಷಿತಾ ವಿ.ಎಸ್. ಹಾಗೂ ಸಾಂಸ್ಕೃತಿಕ ನಾಯಕಿಯಾಗಿ ಹಾದಿಯಾ ಫಾತಿಮಾ ಎ.ಎ. ಅಧಿಕಾರ ವಹಿಸಿಕೊಂಡರು. ಇದೇ ವೇಳೆ ಶಾಲೆಯ ವಿವಿಧ ತಂಡಗಳಿಗೂ ನೂತನ ನಾಯಕರನ್ನು ಆಯ್ಕೆ ಮಾಡಲಾಯಿತು. ಹಸಿರು ತಂಡದ ನಾಯಕಿಯಾಗಿ ವರ್ಷಿನಿ, ಕ್ರೀಡಾ ನಾಯಕನಾಗಿ ರಕ್ಷನ್ ಎಂ., ಶಿಸ್ತು ನಾಯಕಿಯಾಗಿ ಅನಾ ಕೆ.ಎಸ್., ಸಾಂಸ್ಕೃತಿಕ ನಾಯಕಿಯಾಗಿ ಧೃತಿ ಬಿ.ಜೆ. ಹಾಗೂ ಪ್ರಾಥಮಿಕ ವಿಭಾಗದಲ್ಲಿ ಅನುರಾಗ್ ಟಿ.ಎಸ್., ಆರ್ಮೀನ್ ಎಸ್.ಆರ್., ಮನ್ನಾ ಮರಿಯಮ್ ಮತ್ತು ಲಿಕಿನ್ ಪೊನ್ನಣ್ಣ ಎಂ.ಎಸ್. ಆಯ್ಕೆಯಾದರು.
ಹಳದಿ ತಂಡದ ನಾಯಕಿಯಾಗಿ ಸಾನ್ವಿ ಟಿ.ಪಿ., ಕ್ರೀಡಾ ನಾಯಕನಾಗಿ ಲೋಹನ್ ಮನೋಹರ್, ಶಿಸ್ತು ನಾಯಕನಾಗಿ ಕೌಶಿಕ್ ಎಸ್. ಗೌಡ, ಸಾಂಸ್ಕೃತಿಕ ನಾಯಕಿಯಾಗಿ ಭುಶ್ರಾ ಇರಾಮ್ ಹಾಗೂ ಪ್ರಾಥಮಿಕ ವಿಭಾಗದಲ್ಲಿ ಜಿದ್ಹಾ ಎಂ.ಎಸ್., ಹನ್ನಾ ಮರಿಯಮ್ ಇವಾ, ಭಾಗ್ಯಲಕ್ಷಿö್ಮ ಮತ್ತು ಆಸ್ಫಿಯಾ ಬಿ.ಆರ್. ಅವರನ್ನು ವಿವಿಧ ಸ್ಥಾನಗಳಿಗೆ ಆಯ್ಕೆ ಮಾಡಲಾಯಿತು.
ಬಳಿಕ ನೂತನ ವಿದ್ಯಾರ್ಥಿ ನಾಯಕ ಮಹಮ್ಮದ್ ಜುಲಾನಿ ಎಲ್ಲಾ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ ಶಾಲೆಯ ಮುಖ್ಯಸ್ಥೆ ಸುಷ್ಮಾ ತಿಮ್ಮಯ್ಯ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.