ವೀರಾಜಪೇಟೆ, ಜು.೨೪: ನಗರದ ಸಂಚಾರ ಸುವ್ಯವಸ್ಥೆ ಮತ್ತು ಪ್ರಯಾಣಿಕರ ಸುರಕ್ಷತೆಯ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಠಾಣೆ ವತಿಯಿಂದ ವೀರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಆಟೋ ಚಾಲಕರು ಹಾಗೂ ಆಟೋ ಮಾಲೀಕರೊಂದಿಗೆ ಜಾಗೃತಿ ಹಾಗೂ ಸಮನ್ವಯ ಸಭೆ ನಡೆಸಲಾಯಿತು.

ವೀರಾಜಪೇಟೆ ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಕೇವಲ ಪೊಲೀಸರಿಗೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಕಾನೂನು ಪಾಲಿಸಬೇಕು ಎಂದು ಹೇಳಿದರು. ಸಂಚಾರ ನಿಯಮ ಪಾಲನೆ ಮಾಡವುದರೊಂದಿಗೆ ಅತಿವೇಗ, ಕುಡಿದು ವಾಹನ ಚಲಾಯಿಸುವುದು, ಅನಧಿಕೃತವಾಗಿ ರಸ್ತೆ ಬದಿ ಆಟೋ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು. ಎಲ್ಲಾ ಆಟೋ ಚಾಲಕರು ಡ್ರೆöÊವಿಂಗ್ ಲೈಸೆನ್ಸ್, ವಾಹನದ ಆರ್.ಸಿ, ವಿಮೆ, ಪರ್ಮಿಟ್ ದಾಖಲೆಗಳನ್ನು ಸದಾ ಜೊತೆಯಲ್ಲಿಟ್ಟುಕೊಂಡಿರಬೇಕು. ಆಟೋ ಚಾಲನೆ ವೇಳೆ ಕಡ್ಡಾಯವಾಗಿ ಸಮವಸ್ತç ಧರಿಸಬೇಕು. ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಆಟೋಗಳಲ್ಲಿ ಚಾಲಕರ ಮಾಹಿತಿ ಮತ್ತು ಕ್ಯೂ-ಆರ್ ಕೋಡ್ ಹೊಂದಿರುವ ಡಿಸ್ಪೆ÷್ಲÃ ಕಾರ್ಡ್ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಡಿಸ್ಪೆ÷್ಲÃ ಕಾರ್ಡ್ ಅನ್ನು ಎಲ್ಲಾ ಆಟೋಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆಟೋ ಚಾಲಕರು ನೀಡುವ ದಾಖಲಾತಿಯನ್ನು ಪರಿಶೀಲಿಸಿ ಪ್ರತಿ ಆಟೋಗೆ ‘ವಿಟಿಪಿಎಸ್’(ವೀರಾಜಪೇಟೆ ಪಟ್ಟಣ) ನಂಬರ್ ನೀಡಲಾಗುವುದು. ನಂತರ ನಂಬರ್ ಇರುವ ಸ್ಟಿಕ್ಕರ್‌ಗಳನ್ನು ಪ್ರತಿಯೊಬ್ಬರು ತಮ್ಮ ಆಟೋಗಳಲ್ಲಿ ಕಾಣುವ ರೀತಿಯಲ್ಲಿ ಹಾಕುವಂತೆ ಸೂಚಿಸಿದರು.

ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ವಾಹನಗಳ ಅಗತ್ಯ ದಾಖಲಾತಿಗಳನ್ನು ನವೀಕರಿಸಿಕೊಂಡು ಕಾನೂನುಬದ್ಧ ವಾಗಿ ವಾಹನಗಳನ್ನು ಸಂಚರಿಸಬೇಕು. ಚಾಲನಾ ಪರವಾನಗಿ, ವಿಮೆ, ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಎಲ್ಲ ದಾಖಲೆಗಳು ಮಾನ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರಲ್ಲದೆ ಪಟ್ಟಣದಲ್ಲಿ ಶಾಂತಿ, ಕಾನೂನು ಮತ್ತು ಸುಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬAದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

ನಗರ ಠಾಣಾಧಿಕಾರಿ ಹೆಚ್ ಎಸ್ ಪ್ರಮೋದ್ ಮಾತನಾಡಿ, ರಸ್ತೆ ಬದಿ ಅನಧಿಕೃತ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಕಾನೂನು ಪಾಲಿಸಿ, ಸೌಜನ್ಯದಿಂದ ಸೇವೆ ಮಾಡಿ, ಸಾರ್ವಜನಿಕರ ವಿಶ್ವಾಸ ಗಳಿಸಿ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಆಟೋ ಚಾಲಕರು ಹಾಗೂ ಆಟೋ ಮಾಲೀಕರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಸಲಹೆ-ಸೂಚನೆಗಳನ್ನು ವಿನಿಮಯ ಮಾಡಿಕೊಂಡರು.

ಸಭೆಯಲ್ಲಿ ವೀರಾಜಪೇಟೆ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎA. ಶಶಿಧರನ್, ಜೈ ಭಾರತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಎನ್.ಎನ್. ಶಿವು, ಆಟೋ ಚಾಲಕರ ಸಮಸ್ಯೆಗಳ ಹಾಗೂ ವೀರಾಜಪೇಟೆ ಪಟ್ಣಣದಲ್ಲಿ ಆಗುತ್ತಿರುವ ಸಮಸ್ಯೆಗಳ ಅನಾವರಣ ಮಾಡಿದರು. ವೇದಿಕೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ವಾಣಿಶ್ರೀ ಉಪಸ್ಥಿತರಿದ್ದರು. ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೋಲಿಸ್ ಸಿಬ್ಬಂದಿಗಳು, ಆಟೋ ಚಾಲಕರು ಉಪಸ್ಥಿತರಿದ್ದರು.