*ಗೋಣಿಕೊಪ್ಪ, ಜು. ೨೪: ರೋಟರಿ ಗೋಣಿಕೊಪ್ಪ ವತಿಯಿಂದ ಕೈಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಗೋಣಿಕೊಪ್ಪ ಅಧ್ಯಕ್ಷ ಪ್ರಮೋದ್‌ಕಾಮತ್, ಇಮ್ಮಿ ಉತ್ತಪ್ಪ, ಸುಮಿ ಸುಬ್ಬಯ್ಯ, ಸುಭಾಷಿಣಿ, ದಿಲನ್ ಚಂಗಪ್ಪ, ವಿಜಯ್ ಪಿ.ಆರ್. ಹಾಗೂ ಕೆ.ಎಂ. ಕಾವೇರಪ್ಪ ಭಾಗವಹಿಸಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ.ಎ. ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು ನೆಟ್ಟ ಸಸಿಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಿದರು.