ಮಡಿಕೇರಿ, ಜು. ೨೩: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳನ್ನು ಕಡ್ಡಾಯವಾಗಿ ನಿಯಮಾನುಸಾರ ಪ್ರವಾಸೋದ್ಯಮ ಇಲಾಖೆಯಡಿ ನೋಂದಾಯಿಸಿಕೊಳ್ಳಬೇಕೆAದು ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿದೆ. ಇದರಂತೆ ಇದೀಗ ಆನ್‌ಲೈನ್ ಮೂಲಕ ಹೊಸದಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈತನಕ ನೋಂದಾವಣೆ ಮಾಡಿಕೊಳ್ಳದಿದ್ದ ಹೋಂಸ್ಟೇ ಮಾಲೀಕರು ಇದೀಗ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಈ ಆದೇಶವನ್ನು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ರಾಮ್ ಪ್ರಸಾತ್ ಮನೋಹರ್ ಅವರು ಹೊರಡಿಸಿದ್ದು, ಕೆಲ ದಿನಗಳು ಕಳೆದಿವೆ. ಈ ಆದೇಶದ ಬಳಿಕ ಈತನಕ ನೋಂದಾವಣಿ ಮಾಡಿಕೊಳ್ಳದಿದ್ದವರು ಆನ್‌ಲೈನ್ ನೋಂದಣಿಗೆ ಮುಂದಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ೫೦೦ ರಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ.

ಕೊಡಗು ಜಿಲ್ಲೆಯಲ್ಲಿ ಇದೀಗ ಹೊಸದಾಗಿ ಸುಮಾರು ೮೦ ರಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಯೂ ನಡೆಯುತ್ತಿದ್ದು, ಇಲಾಖೆಯ ಮಾರ್ಗಸೂಚಿಯಂತಿರದ ಅರ್ಜಿಗಳು ತಿರಸ್ಕರಿಸಲ್ಪಡುತ್ತಿದ್ದು ಇಂತಹವರು ವ್ಯವಸ್ಥೆ ಸರಿ ಮಾಡಿಕೊಂಡು ಮರು ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದಲ್ಲಿ ಸಲ್ಲಿಕೆಯಾಗಿರುವ ೫೦೦ ರಷ್ಟು ಅರ್ಜಿಗಳ ಪೈಕಿ ಕೊಡಗಿನ ೮೦ ರಷ್ಟು ಅರ್ಜಿಗಳೂ ಸೇರಿವೆ.

ಜಿಲ್ಲೆಯಲ್ಲಿ ಪ್ರಸ್ತುತ ೧೬೫೬ ನೋಂದಾಯಿತ ಹೋಂಸ್ಟೇ

ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ೧೬೫೬ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾವಣೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ೮೨೨, ಕುಶಾಲನಗರ ೧೮೨, ವೀರಾಜಪೇಟೆ ೩೨೨, ಸೋಮವಾರಪೇಟೆ ೨೪೦ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೯೦ ಹೋಂಸ್ಟೇಗಳಷ್ಟೆ ನೋಂದಾಯಿತವಾಗಿವೆ.

ಇದೀಗ ನೋಂದಾಯಿತ ಹೋಂಸ್ಟೇಗಳನ್ನು ಹೊರತುಪಡಿಸಿ ಇತರರು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಬಳಿಕ ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿ.ಯು.ಡಿ.ಸಿ.) ಅಧಿಕಾರಿಗಳ ತಂಡ ಇದನ್ನು ಕೂಲಂಕಷವಾಗಿ ಪರಿಶೀಲಿಸಿ ಎಲ್ಲಾ ವ್ಯವಸ್ಥೆಗಳು ಅಂದರೆ ಪ್ರಮುಖವಾಗಿ ಮೂಲಸೌಕರ್ಯ, ಭದ್ರತೆ, ಸ್ವಚ್ಛತೆ ಹಾಗೂ ಇನ್ನಿತರ ಮಾನದಂಡಗಳ ಪ್ರಕಾರ ಸಮರ್ಪಕವಾಗಿದ್ದರಷ್ಟೆ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ಇದು ಐದು ವರ್ಷಗಳ ಅವಧಿಗೆ ಮುಂದುವರಿಯಲಿದ್ದು, ಮತ್ತೆ ನವೀಕರಣ ಮಾಡಿಕೊಳ್ಳಬೇಕಿದೆ.

ಉದ್ಯಮ ಕೈಬಿಟ್ಟ ೧೫ ಮಂದಿ

ಜಿಲ್ಲೆಯಲ್ಲಿ ಒಟ್ಟಾರೆಯಾಗಿ ೨೧೬೦ ರಷ್ಟು ಹೋಂಸ್ಟೇಗಳು ಈ ಹಿಂದೆ ನೋಂದಾಯಿತಗೊAಡಿವೆ. ಇದರಲ್ಲಿ ಪ್ರಸ್ತುತ ೧೬೫೦ ರಷ್ಟು ನವೀಕರಣಗೊಂಡಿವೆ. ಕೆಲವು ಹೋಂಸ್ಟೇಗಳು ಕಾರಣಾಂತರಗಳಿAದ ನವೀಕರಣಗೊಂಡಿಲ್ಲ.

ಇದಲ್ಲದೆ ಉದ್ಯಮ ನಡೆಸುತ್ತಿದ್ದ ೧೫ ಮಂದಿ ಕಾರಣಾಂತರಗಳಿAದ ತಮ್ಮ ಪರವಾನಗಿ ರದ್ಧತಿ ಕೋರಿ ಪ್ರವಾಸೋದ್ಯಮ ಇಲಾಖೆಗೆ ಲಿಖಿತ ಪತ್ರ ನೀಡಿರುವುದಾಗಿಯೂ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.