ಮಡಿಕೇರಿ, ಜು. ೨೩: ಕಾರ್ಗಿಲ್‌ನಲ್ಲಿ ೨೭ ವರ್ಷಗಳ ಹಿಂದೆ ಭಾರತೀಯ ಯೋಧರು ತೋರಿದ ತ್ಯಾಗ, ಬಲಿದಾನ, ಶೌರ್ಯದ ಸ್ಮರಣೆಯಾಗಿ ಇದೇ ಜುಲೈ ೨೬ ರಂದು ಕೊಡಗು ಪತ್ರಕರ್ತರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ೧೨೫ ಸಂಘ-ಸAಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾಹಿತಿ ನೀಡಿದ್ದಾರೆ
ಮಡಿಕೇರಿಯ ಗೌಡ ಸಮಾಜದ ಸಭಾಂಗಣದಲ್ಲಿ ತಾ. ೨೬ ರಂದು ಭಾನುವಾರ ಸಂಜೆ ೫ ಗಂಟೆಯಿAದ ಆಯೋಜಿತ ಕಾರ್ಗಿಲ್ ವಿಜಯ್ ದಿವಸ್ - ಸೈನಿಕರೇ ನಾವೆಂದು ಮರೆಯೋದಿಲ್ಲ ನಿಮ್ಮನ್ನು ಎಂಬ ಸೈನಿಕರಿಗೆ ಪುಪ್ಪನಮನ - ಗಾನ ನಮನ ಮತ್ತು ಗೌರವ ನಮನ ಸಲ್ಲಿಕೆಯ ಕಾರ್ಯಕ್ರಮವನ್ನು ಮಡಿಕೇರಿ ಆರ್ಮಿ ಕ್ಯಾಂಟೀನ್ ಹಿರಿಯ ವ್ಯವಸ್ಥಾಪಕ ಎನ್.ಎಸ್. ಕಾವೇರಿಯಪ್ಪ ಉದ್ಘಾಟಿಸಲಿದ್ದಾರೆ. ನಾಡಿನ ಹೆಸರಾಂತ ಗಾಯಕ ಮೈಸೂರಿನ ರಾಜೇಶ್ ಪಡಿಯಾರ್ ಮತ್ತು ತಂಡದಿAದ ಗೀತನಮನ ಅಂಗವಾಗಿ ದೇಶಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿತವಾಗಿದೆ.
ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಕ್ತಿ ಪ್ರತಿಷ್ಠಾನ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕು, ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ವೈದ್ಯಕೀಯ ಒಕ್ಕೂಟದ ಕೊಡಗು ಜಿಲ್ಲಾ ಘಟಕ, ಹಾರಂಗಿ ಅತ್ತೂರಿನ ಜ್ಞಾನಗಂಗ ವಸತಿ ಶಾಲೆ, ಕೊಡಗು ಗೌಡ ಸಮಾಜ, ಮಡಿಕೇರಿಯ ಚೇಂಬರ್ ಆಫ್ ಕಾಮರ್ಸ್, ಮೂರ್ನಾಡಿನ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ಮಡಿಕೇರಿ ಇನ್ನರ್ ವೀಲ್, ಕೊಡಗು ಜಿಲ್ಲಾ ಸೌಂಡ್ಸ್, ಲೈಟ್ಸ್, ಶಾಮಿಯಾನ ಡೆಕೋರೇಷನ್ ಮಾಲೀಕರ ಸಂಘ, ಮಡಿಕೇರಿಯ ಸ್ವಾಮಿ ಅಯ್ಯಪ್ಪ ಫ್ಲವರ್ ಸ್ಟಾಲ್ ನವರು ಸಹಯೋಗ ನೀಡಿದ್ದಾರೆ.
ಸೈನಿಕರ ನಾಡಾಗಿ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮಾಜಿ ಸೈನಿಕರಿಗೂ ನಾಡಿನ ಜನತೆ ಗೌರವ ಸಲ್ಲಿಸಲಿದ್ದಾರೆ.. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದ ಮೂಲಕ ಭಾರತೀಯ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವುದಲ್ಲದೇ, ಪ್ರಸ್ತುತ ಸೈನಿಕರಾಗಿ ದೇಶಸೇವೆ ಮಾಡುತ್ತಿರುವ ಯೋಧರು, ಕುಟುಂಬ ವರ್ಗದವರಿಗೂ ಪ್ರೋತ್ಸಾಹ ತುಂಬುವ ಕಾರ್ಯ ಈ ಸಮಾರಂಭದ ಮೂಲಕ ಆಗಲಿದೆ ಎಂದೂ ಅನಿಲ್ ಎಚ್.ಟಿ, ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ. ಚೇತನ್ ಜಿ.ಡಿ. ಕೊಡಗು ಪತ್ರಕರ್ತರ ಸಂಘದ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ರೋಟರಿ ವಲಯ ೬ ರ ಸಹಾಯಕ ಗವರ್ನರ್ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಪಾಲ್ಗೊಳ್ಳಲಿದ್ದಾರೆ.
ಗೌರವ ನಮನ ಸಲ್ಲಿಸುವ ಸಂಘ ಸಂಸ್ಥೆಗಳು
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಕೊಡಗು, ಮಡಿಕೇರಿ ಮಾಜಿ ಸೈನಿಕರ ಸಂಘ, ಕೊಡಗು ಮಾಜಿ ಸೈನಿಕರ ಸಂಘ ಮಾಜಿ ಸೈನಿಕರ ಸಂಘ, ಕುಶಾಲನಗರ ಮಾಜಿ ಸೈನಿಕರ ಸಂಘ, ಸೋಮವಾರಪೇಟೆ ಅರೆಸೇನಾ ಪಡೆ ನಿವೃತ್ತಯೋಧರ ಒಕ್ಕೂಟ, ಕೊಡಗು ಗೌಡ ಮಾಜಿ ಸೈನಿಕರ ಸಂಘ, ಮಡಿಕೇರಿ ನಗರಸಭೆ ಮಡಿಕೇರಿ, ಸ್ವಸ್ಥ ವಿಶೇಷ ಮಕ್ಕಳ ಶಾಲೆ ಸುಂಟಿಕೊಪ್ಪ. ಕೊಡಗು ಶಿಶು ಕಲ್ಯಾಣ ಸಂಸ್ಥೆ ಮಡಿಕೇರಿ, ಕೊಡಗು ಜಿಲ್ಲಾ ಪೊಲೀಸ್ ಮಡಿಕೇರಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ,
೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಕೊಡಗು ನಗರಾಭಿವೃದ್ಧಿ ಪ್ರಾಧಿಕಾರ ಮಡಿಕೇರಿ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ, ಮಡಿಕೇರಿ, ವಕೀಲರ ಸಂಘ, ಮಡಿಕೇರಿ, ರೋಟರಿ ಮಡಿಕೇರಿ ವುಡ್ಸ್, ರೋಟರಿ ಹಿಲ್ಸ್ ಸೋಮವಾರಪೇಟೆ, ರೋಟರಿ ಕ್ಲಬ್ ಶನಿವಾರಸಂತೆ, ರೋಟರಿ ಕ್ಲಬ್ ಗೋಣಿಕೊಪ್ಪ, ರೋಟರಿ ಕ್ಲಬ್ ಕುಶಾಲನಗರ, ಇನ್ನರ್ ವೀಲ್ ಸೋಮವಾರಪೇಟೆ, ತಮಿಳು ಯೂತ್ ಫೆಡರೇಷನ್ ಕೊಡಗು, ಕೊಡವ ಸಮಾಜ, ಮಡಿಕೇರಿ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಮಡಿಕೇರಿ, ಕೊಡಗು ಚೇಂಬರ್ ಆಫ್ ಕಾಮರ್ಸ್, ಹೋಂಸ್ಟೇ ಅಸೋಸಿಯೇಷನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ಕೊಡಗು ಭಾರತೀಯ ಜನತಾ ಪಾರ್ಟಿ, ಕೊಡಗು ಜಾತ್ಯಾತೀತ ಜನತಾದಳ, ಕೊಡಗು ಎಸ್‌ಡಿಪಿಐ, ಕೊಡಗು, ಪೊಮ್ಮಕ್ಕಡ ಕೂಟ ಮಡಿಕೇರಿ, ಪೊಮ್ಮಕ್ಕಡ ಕೂಟ ವೀರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ, ಲಯನ್ಸ್ ಕ್ಲಬ್ ಸುಂಟಿಕೊಪ್ಪ, ರೆಡ್ ಕ್ರಾಸ್ ಕೊಡಗು ಘಟಕ, ಕೊಡಗು ವಿದ್ಯಾಲಯ ಮಡಿಕೇರಿ, ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ, ಮಡಿಕೇರಿ ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಮಡಿಕೇರಿ ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ, ಆರೋಹಣ ತಂಡ ಕೊಡಗು, ಜಿಲ್ಲಾ ಕುಲಾಲ ಸಮಾಜ ಕೊಡಗು, ಹಿಂದೂ ಮಲಯಾಳಿ ಸಮಾಜ ಕೊಡಗು, ಬಂಟರ ಸಮಾಜ ಕೊಡಗು, ಯೋಗಿ ನಾರಾಯಣ ಬಲಿಜ ಸಮಾಜ ಕೊಡಗು, ಜಿಲ್ಲಾ ಮೊಗೇರ ಸಮಾಜ ಕೊಡಗು, ದಲಿತ ಸಂಘರ್ಷ ಸಮಿತಿ ಕೊಡಗು, ಬ್ಯಾರಿ ವೆಲ್ಫೇರ್ ಟ್ರಸ್ಟ್, ಮಡಿಕೇರಿ, ಕ್ರೆöÊಸ್ತರ ಸೇವಾ ಸಂಘ ಮಡಿಕೇರಿ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು, ವೀರಶೈವ ಸಮಾಜ ಮಡಿಕೇರಿ, ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ, ಜಿಲ್ಲಾ ಜಮಾಅತ್ ಎ ಇಸ್ಲಾಂ ಹಿಂದ್ ಕೊಡಗು, ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ, ಸಮರ್ಥ ಕನ್ನಡಿಗರು ಸಂಸ್ಥೆ ಕೊಡಗು, ಕನ್ನಡ ಸಿರಿ ಸ್ನೇಹಬಳಗ ಕುಶಾಲನಗರ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು, ಗೌಡ ಸಮಾಜಗಳ ಒಕ್ಕೂಟ ಕೊಡಗು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಂಘ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕೊಡಗು, ಕೊಡವ ಸಮಾಜ ಮಾದಾಪುರ, ಕರ್ನಾಟಕ ನಾಯರ್ಸ್ ಸರ್ವೀಸ್ ಸೊಸೈಟಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ಮಡಿಕೇರಿ, ಕರ್ನಾಟಕ ಸ್ಟೇಟ್ ಟೈರ‍್ಸ್ ಅಸೋಸಿಯೇಷನ್ ಕೊಡಗು, ಕೊಡಗು ಅಭಿವೃದ್ಧಿ ಸಮಿತಿ, ತ್ರಿನೇತ್ರ ಯುವಕ ಸಂಘ ಹಾಕತ್ತೂರು., ಶ್ರೀ ಸೋಮೇಶ್ವರ ದೇವಾಲಯ ಸಮಿತಿ ಸೋಮವಾರಪೇಟೆ, ಕೊಡಗು ಗೌಳಿ ಸಮುದಾಯ, ವಾಸವಿ ಮಹಿಳಾ ಸಂಘ ಮಹದೇವಪೇಟೆ ಮಡಿಕೇರಿ, ಗೃಹರಕ್ಷಕ ದಳ ಕೊಡಗು, ವಾಹನ ಚಾಲಕರು ಮಾಲೀಕರ ಸಂಘ ಸೋಮವಾರಪೇಟೆ., ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ, ಮಾನವೀಯ ಸ್ನೇಹಿತರ ಒಕ್ಕೂಟ ಕೊಡಗು, ಟ್ಯಾಕ್ಸಿ ಡ್ರೆöÊವರ್ಸ್ ಅಸೋಸಿಯೇಷನ್ ಸೋಮವಾರಪೇಟೆ, ಭಾರವಿ ಕನ್ನಡ ಸಂಘ, ಕುಶಾಲನಗರ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕುಶಾಲನಗರ, ಕರವೇ ಸ್ವಾಭಿಮಾನಿ ಬಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ, ಕೋಟಿ ಚೆನ್ನಯ್ಯ ಬಿಲ್ಲವರ ಸಮಾಜ ಕುಶಾಲನಗರ, ಮೂರ್ನಾಡು, ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆ ಮಾದಾಪುರ, ಕೊಡಗು ಜಿಲ್ಲಾ ಬಂಟರ ಸಮಾಜ, ಕೊಡಗು ಜನ ಅಭಿವೃದ್ಧಿ ಸಮಿತಿ ಮಡಿಕೇರಿ, ಮರ್ಕೇರಾ ಡೌನ್ಸ್ ಗಾಲ್ಪ್ ಕ್ಲಬ್ ಮಡಿಕೇರಿ, ಕಾಸ್ಮೋಪಾಲಿಟನ್ ಕ್ಲಬ್ ಮಡಿಕೇರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಜಾನಪದ ಪರಿಷತ್ ಮಡಿಕೇರಿ, ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕ , ಜಾನಪದ ಪರಿಷತ್ ಮಡಿಕೇರಿ ತಾಲೂಕು ಘಟಕ, ಕೊಡಗು ಲೇಖಕ ಮತ್ತು ಕಲಾವಿದರ ಬಳಗ, ಸವಿತಾ ಸಮಾಜ ಮಡಿಕೇರಿ, ಸ್ಕೌಟ್ಸ್ ಮತ್ತು ಗೈಡ್ಸ್. ಸಂಸ್ಥೆ ಮಡಿಕೇರಿ ತಾಲೂಕು, ಪೌರಕಾರ್ಮಿಕರ ಸಂಘ. ಮಡಿಕೇರಿ, ಕೊಡಗು ಕಲಾವಿದರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕ, ವೀರ ಮಡಿವಾಳರ ಸಂಘ ಕೊಡಗು , ಕೃಷಿ ಪತ್ತಿನ ಸಹಕಾರ ಸಂಘ ಮದೆ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ೨ನೇ ಮೊಣ್ಣಂಗೇರಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ, ಕೊಡಗು ಟ್ರಾವೆಲ್ ಅಸೋಸಿಯೇಷನ್ ಕೊಡಗು, ಕೊಡಗು ಯೋಗಿ ನಾರಾಯಣ ಬಲಿಜ ಸಮಾಜ, ಮೂರ್ನಾಡು, ಕೊಡಗು ಹಿತರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಬರಹಗಾರರ ಸಂಘ, ಕೊಡಗು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೊಡಗು, ಲಾರಿ ಮಾಲೀಕರ-ಚಾಲಕರ ಸಂಘ, ಮಡಿಕೇರಿ, ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಸಂಘ, ಕೊಡಗು, ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ ಮಡಿಕೇರಿ, ಯೂರೋ ಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆ, ಜೀಪು ಮಾಲೀಕರ ಮತ್ತು ಚಾಲಕರ ಸಂಘ ಮಾಂದಲಪಟ್ಟಿ. ದಸರಾ ದಶಮಂಟಪ ಸಮಿತಿ ಮಡಿಕೇರಿ, ಸೇವಾ ಭಾರತಿ ಕೊಡಗು, ಸರ್ವೋದಯ ಸಮಿತಿ ಮಡಿಕೇರಿ, ಎಸ್‌ಎನ್‌ಡಿಪಿ ಯೂನಿಯನ್ ಕೊಡಗು, ಸರ್ಕಾರಿ ನೌಕರರ ಸಂಘ, ಕೊಡಗು ಶ್ರೀ ಕೋದಂಡರಾಮ ರಾಮೋತ್ಸವ ಸಮಿತಿ, ಮಡಿಕೇರಿ, ಗೌಡ ಸಮಾಜ, ಕುಶಾಲನಗರ, ಗೌಡ ಸಮಾಜ ಗುಡ್ಡೆಹೊಸೂರು, ಗೌಡ ಯುವ ವೇದಿಕೆ, ಕೊಡಗು, ಗೌಡ ನಿವೃತ್ತ ನೌಕರರ ಸಂಘ ಕೊಡಗು, ಗೌಡ ವಿದ್ಯಾ ಸಂಘ ಕೊಡಗು, ಗೌಡ ಮಹಿಳಾ ಒಕ್ಕೂಟ, ಕೊಡಗು, ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಅಭಿವೃದ್ಧಿ ಸಂಘ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಮಡಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು, ಕಲಾನಗರ ಸಾಂಸ್ಕೃತಿಕ ಕಲಾವೇದಿಕೆ ಮಡಿಕೇರಿ, ಜನನಿ ಮಹಿಳಾ ಮಂಡಳಿ ಮಡಿಕೇರಿ, ಕೋಟಿ ಚೆನ್ನಯ್ಯ ಬಿಲ್ಲವರ ಸಮಾಜ, ಕುಶಾಲನಗರ, ಭಾರತ್ ಸೇವಾ ದಳ, ಕೊಡಗು.