ಗೊಣಿಕೊಪ್ಪಲು, ಜು .೨೩: ಮಳೆಯ ಅಭಾವದ ನಡುವೆ ಲಭ್ಯವಿರುವ ನೀರನ್ನು ಬಳಸಿಕೊಂಡು ಭತ್ತದ ಕೃಷಿ ಚಟುವಟಿಕೆಗೆ ಬೇಕಾದ ಬಿತ್ತನೆ ಬೀಜವನ್ನು ಬಿತ್ತಿ ಇನ್ನೆರಡು ದಿನಗಳಲ್ಲಿ ಪೈರನ್ನು ನಾಟಿ ಮಾಡುವ ಆಲೋಚನೆಯಲ್ಲಿದ್ದ ರೈತನ ಭತ್ತದ ಗದ್ದೆಗೆ ರಾತ್ರಿಯ ವೇಳೆ ಲಗ್ಗೆ ಇಟ್ಟ ಒಂಟಿ ಸಲಗವೊಂದು ಬೆಳೆದು ನಿಂತಿದ್ದ ಪೈರನ್ನು ತಿಂದು ಧ್ವಂಸಗೊಳಿಸಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದಾನೆ.
ಪೊನ್ನAಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಬುಡುಮಾಡ ರಾಜೇಶ್ ಎಂಬವರು ವರ್ಷಂಪ್ರತಿಯAತೆ ಈ ಬಾರಿಯು ತಮ್ಮ ಭತ್ತದ ಗದ್ದೆಗಳನ್ನು ಕೃಷಿ ಚಟುವಟಿಕೆಗೆ ತಯಾರು ಮಾಡಿದ್ದರು. ಗದ್ದೆಯಲ್ಲಿ ಬಿತ್ತನೆ ಬೀಜ ಬಿತ್ತನೆ ಮಾಡಿದ್ದರು. ಇನ್ನು ಎರಡು ದಿನಗಳಲ್ಲಿ ಪೈರನ್ನು ನಾಟಿ ಮಾಡಲು ಅಣಿಯಾಗಿದ್ದರು ರಾತ್ರಿಯ ವೇಳೆ ಭತ್ತದ ಗದ್ದೆಗೆ ದಾಳಿ ಇಟ್ಟ ಒಂಟಿ ಸಲಗವು ಬೆಳೆದು ನಿಂತಿದ್ದ ಪೈರಿನ ಮೇಲೆ ಅಡ್ಡಾಡುವ ಮೂಲಕ ಪೈರನ್ನು ನಾಶಗೊಳಿಸಿದೆ. ಇದರಿಂದಾಗಿ ಸುತ್ತಮುತ್ತಲಿನ ರೈತರು ಕೂಡ ಕಂಗಾಲಾಗಿದ್ದಾರೆ.