ಮಡಿಕೇರಿ, ಜು. ೨೨: ಆಗಸ್ಟ್ ೧೫ ರಿಂದ ೩೦ ರವರೆಗೆ ನೆದರ್ಲ್ಯಾಂಡ್ ಹಾಗೂ ಬೆಲ್ಜಿಯಂನಲ್ಲಿ ನಡೆಯಲಿರುವ ೧೬ನೇ ಆವೃತ್ತಿಯ ಎಫ್.ಐ.ಹೆಚ್ (ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಹಾಕಿ) ಹಾಕಿ ವಿಶ್ವಕಪ್ನ ಭಾರತೀಯ ಪುರುಷರ ತಂಡಕ್ಕೆ ಕೂಡಿಗೆಯ ಕ್ರೀಡಾ ಶಾಲೆಯ ಕ್ರೀಡಾಪಟು ಮೋಹಿತ್ ಹೆಚ್.ಎಸ್ ಆಯ್ಕೆಯಾಗಿದ್ದಾರೆ.
೨೪ ವರ್ಷ ಪ್ರಾಯದ ಮೋಹಿತ್ ಅವರು ೨೦೧೫ರಲ್ಲಿ ಪ್ರೌಢಶಾಲೆಗೆ ಕೂಡಿಗೆಯ ಕ್ರೀಡಾಶಾಲೆಗೆ ಆಯ್ಕೆಯಾದರು. ೨೦೧೮ರವರೆಗೆ ಅಲ್ಲಿನ ಹಾಕಿ ತರಬೇತುದಾರ ಸಂಜಯ್ ಬಾಣದ ಅವರಲ್ಲಿ ತರಬೇತಿ ಪಡೆದರು. ಆ ಸಂದರ್ಭದಲ್ಲಿಯೇ ಗೋಲ್ಕೀಪರ್ ಪಾತ್ರಕ್ಕೆ ಹೆಚ್ಚು ಒತ್ತು ನೀಡಿದ್ದ ಮೋಹಿತ್ ಹೆಚ್.ಎಸ್ ಇದೀಗ ರಾಷ್ಟಿçÃಯ ತಂಡದ ಗೋಲ್ಕೀಪರ್ ಆಗಿ ವಿಶ್ವಕಪ್ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. ವಿಶ್ವಕಪ್ಗೆ ಆಯ್ಕೆಯಾಗಿರುವ ಆಟಗಾರರ ಪೈಕಿ ಇವರು ಕರ್ನಾಟಕದ ಏಕೈಕ ಆಟಗಾರರಾಗಿದ್ದಾರೆ. ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಶಶಿಕುಮಾರ್-ಆಶಾರಾಣಿ ದಂಪತಿಯ ಪುತ್ರ.
೫ ದಶಕಗಳ ಬಳಿಕ ಕಪ್ ಗೆಲ್ಲುವ ನಿರೀಕ್ಷೆ
೧೯೭೧ರಲ್ಲಿ ಪ್ರಾರಂಭಗೊAಡ ಹಾಕಿ ವಿಶ್ವಕಪ್ ಟೂರ್ನಿಯ ೩ನೇ ಆವೃತ್ತಿ ೧೯೭೫ರಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದಾದ ಬಳಿಕ ೫ ದಶಕಗಳಾದರೂ ಮತ್ತೇ ವಿಶ್ವಕಪ್ ಗೆಲ್ಲಲು ಯಶಸ್ವಿಯಾಗಿಲ್ಲ. ೨೦೨೩ರಲ್ಲಿ ಕಳೆದ ಆವೃತ್ತಿ ಭಾರತದಲ್ಲಿಯೇ ನಡೆದರೂ ಭಾರತವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು.
೨೦೨೦ ಹಾಗೂ ೨೦೨೪ರಲ್ಲಿ ಒಲಂಪಿಕ್ ಕಂಚು ಪದಕ ಹಾಗೂ ೨೦೨೫ರಲ್ಲಿ ಏಷ್ಯಾ ಕಪ್ ಚಾಂಪಿಯನ್ ಆಗಿರುವ ಭಾರತ ಈ ಬಾರಿಯ ವಿಶ್ವಕಪ್ನಲ್ಲಿ ಗಣನೀಯ ಸಾಧನೆಗೈಯ್ಯುವ ನಿರೀಕ್ಷೆಯಿದೆ. ಒಟ್ಟು ೧೬ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ೪ ಗುಂಪುಗಳು ಗ್ರೂಪ್ ಹಂತದಲ್ಲಿದ್ದು, ಭಾರತದ ಗುಂಪಿನಲ್ಲಿ ಇಂಗ್ಲೆAಡ್, ವೇಲ್ಸ್ ಹಾಗೂ ಪಾಕಿಸ್ತಾನ ಸ್ಥಾನ ಪಡೆದಿವೆ.
ನಾಯಕ ಹರ್ಮನ್ಪ್ರೀತ್ ಸಿಂಗ್ನೊAದಿಗೆ ಇತರ ಆಟಗಾರರಾದ ಜರ್ಮನ್ಪ್ರೀತ್ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್ ಸುಮಿತ್, ಯಶ್ದೀಪ್ ಸಿವಾಚ್, ರಜೀಂದರ್ ಸಿಂಗ್, ಆದಿತ್ಯ ಅರ್ಜುನ್, ಹಾರ್ದಿಕ್ ಸಿಂಗ್, ಮನ್ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್, ದಿಲ್ಪ್ರೀತ್ ಸಿಂಗ್, ಶಿಲಾನಂದ್ ಲಕ್ಷರಾ, ಸುಖ್ಜೀತ್ ಸಿಂಗ್, ಮನ್ದೀಪ್ ಸಿಂಗ್, ಅಭಿಷೇಕ್ ಹಾಗೂ ಗೋಲ್ಕೀಪರ್ಗಳಾಗಿ ಸೂರಜ್ ಕರ್ಕೇರ ಮತ್ತು ಕೂಡಿಗೆ ಶಾಲೆಯ ಮೋಹಿತ್ ಹೆಚ್.ಎಸ್ ಸ್ಥಾನ ಪಡೆದುಕೊಂಡಿದ್ದಾರೆ.