ಬಾಡಗರಕೇರಿ ನಿವಾಸಿ ಅಮ್ಮತ್ತಿರ ಆರ್. ಪರಮೇಶ್ವರ್ (೬೬) ಅವರು ತಾ. ೨೨ ರಂದು ನಿಧನರಾದರು. ಮೃತರು ವೀರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಅಮ್ಮತ್ತಿರ ರೇವತಿ ಸೇರಿದಂತೆ ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರು ಈ ಹಿಂದೆ ಬಿರುನಾಣಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಮೃತ್ಯುಂಜಯ ದೇವಸ್ಥಾನ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಅಂತ್ಯಕ್ರಿಯೆ ತಾ. ೨೩ ರಂದು (ಇಂದು) ಬೆಳಿಗ್ಗೆ ೧೧ ಗಂಟೆಯೊಳಗೆ ಸ್ವಗ್ರಾಮದಲ್ಲಿ ನಡೆಯಲಿದೆ.

* ಮಡಿಕೇರಿ ಆರ್.ಆರ್. ನಗರ ನಿವಾಸಿ ಕಣ್ಣನ್ (ರಾಜೇಶ್-ಟಿಂಕರ್ - ಪೈಂಟರ್ - ೫೫) ಅವರು ತಾ. ೨೨ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.