ನವದೆಹಲಿ, ಜು. ೨೧: ನಿನ್ನೆ ದಿನ ನವದೆಹಲಿಯಲ್ಲಿ ನಡೆದಿದ್ದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಪೂರಕವಾಗಿ ಇಂದು ಕಾಂಗ್ರೆಸ್ ನಾಯಕರು - ಕಾರ್ಯಕರ್ತರು ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದಿನ ಲೋಕ್ ಕಲ್ಯಾಣ ಮಾರ್ಗದಲ್ಲಿ ಸಂಜೆ ಧರಣಿ ಕುಳಿತಿದ್ದರು. ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರಧಾನಿ ಅವರ ಆಪ್ತ ಸಚಿವ ಜಿತೇಂದ್ರ ಸಿಂಗ್ ಅವರು ಸ್ಥಳಕ್ಕೆ ತೆರಳಿ ಮನವಿ ಮಾಡಿದರೂ ಇದಕ್ಕೆ ರಾಹುಲ್ ಗಾಂಧಿ ಅವರು ಒಪ್ಪದೆ ಧರಣಿ ಮುಂದುವರಿಸಿದರು. ಪ್ರಧಾನಿ ನಿವಾಸದ ಮುಂದೆ ಭದ್ರÀತಾ ಕಾನೂನು ರಕ್ಷಣೆÀ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಎಲ್ಲ ಧರಣಿ ನಿರತರನ್ನು ವಶಕ್ಕೆ ಪಡೆದರು.
ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರ‍್ರಿಯಾಂಕ ಗಾಂಧಿ ಕರ್ನಾಟಕದÀ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇರಳ ಮುಖ್ಯಮಂತ್ರಿ ಸತೀಶನ್, ಕೆ.ಸಿ. ವೇಣುಗೋಪಾಲ್ ಸಹಿತ ಕಾಂಗ್ರೆಸ್ ಸಂಸದರು - ಕಾರ್ಯಕರ್ತರು ಪೊಲೀಸ್ ವಶಕ್ಕೆ ಒಳಗಾದರು. ಅಲ್ಲದೆ ಎಸ್.ಪಿ. ನಾಯಕ ಅಖಿಲೇಶ್ ಯಾದವ್ ಮತ್ತಿತರರನ್ನು ಬಂಧಿಸಲಾಯಿತು. ಅನೇಕ ಕಾಂಗ್ರೆಸ್ ಸಂಸದರು, ನೂರಾರು ಕಾಂಗ್ರೆೆÉಸ್ ಕಾರ್ಯಕರ್ತರನ್ನು ಪೊಲೀಸ್ ವಾಹನಗಳಲ್ಲಿ ತುಂಬಿಸಿ ಕರೆದೊಯ್ಯಲಾಯಿತು. ಪೊಲೀಸರ ಬಂಧನ ಕಾರ್ಯ ಸಂದರ್ಭ ರಾಹುಲ್ ಗಾಂಧಿ ನೆಲದಲ್ಲಿ ಮಲಗಿ ಪ್ರತಿಭಟಿಸಿದರು. ಪೊಲೀಸರು ಹಲವು ಕಾಲ ಪ್ರಯತ್ನಿಸಿ ನಾಜೂಕಿನಿಂದ ಅವರನ್ನು ಮೇಲಕ್ಕೆತ್ತಿ ವಾಹನಕ್ಕೆ ಒಯ್ದರು. ಆ ಸಂದÀರ್ಭ ‘ಇದೇ ಪ್ರಜಾಪ್ರಭುತ್ವ’ ಎಂದು ರಾಹುಲ್ ಘೋಷಿಸಿದರು. ಪ್ರತಿಭಟನೆಯೊಂದಿಗೆ ವಾಹನವೇರಿದ ಪ್ರ‍್ರಿಯಾಂಕ ಗಾಂಧಿ ಮಾತನಾಡಿ, ‘ಅವರು ಹೇಡಿಗಳು, ನಮ್ಮನ್ನು ಎದುರಿಸಲು ಧೈರ್ಯವಿಲ್ಲದೆÉ ಈ ಕೆಲಸ ಮಾಡಿದ್ದಾರೆ. ಮೋದಿ ಪೊಲೀಸರ ರಕ್ಷಣೆಯಲ್ಲಿ ಅಡಗಿದ್ದಾರೆ’ ಎಂದು ಛೇಡಿಸಿದರು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ ಇದು ದೇಶದ ಯುವಜನರ ಭವಿಷ್ಯದ ಪ್ರಶ್ನೆ. ಈ ಹೋರಾಟದಲ್ಲಿ ನಾವೆಲ್ಲ ತೊಡಗಿಸಿಕೊಂಡಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಸಚಿವರ ರಾಜೀನಾಮೆಗೆÀ ಪಟ್ಟು
ಇದಕ್ಕೂ ಮುನ್ನ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದ ಎದುರು ನೆಲದ ಮೇಲೆ ಕುಳಿತು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ನೀಟ್ ಅಕ್ರಮಕ್ಕೆ ಸಂಬAಧಿಸಿದAತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ಸೋಮವಾರ ನಡೆಸಿದ "ಸಂಸತ್ ಚಲೋ" ವೇಳೆ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಬಲ ಪ್ರಯೋಗ ಖಂಡಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಧರಣಿ ನಡೆಸಿತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆಗೆ ರಾಹುಲ್ ಆಗ್ರಹಿಸಿದರು. ನಮ್ಮ ಬಳಿಗೇ ಪ್ರಧಾನಿ ಬಂದು ಮಕ್ಕಳ ಭವಿಷ್ಯದ ಬಗ್ಗೆ ಭರವಸೆ ನೀಡಲಿ ಎಂದು ಒತ್ತಾಯಿಸಿದರು.
ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದ ಪಕ್ಷದ ಹಲವಾರು ಸಂಸದರು ಮತ್ತು ನಾಯಕರು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ‘ನಿನ್ನೆ ಯುವ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿದರು. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.
ಇನ್ನು ಪ್ರಧಾನಿಯ ನಿವಾಸವು ಭದ್ರತಾ ವಲಯವಾಗಿರುವ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಳಿಸುವAತೆ ಪೊಲೀಸರು, ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು. ಅಲ್ಲದೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸ್ಥಳಕ್ಕೆ ತೆರಳಿ ರಾಹುಲ್ ಗಾಂಧಿ ಅವರೊಂದಿಗೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಆಗ ರಾಹುಲ್ ಪ್ರತಿಕ್ರಿಯಿಸಿ ಮುಖ್ಯವಾಗಿ ಲೋಕಸಭೆಯಲ್ಲಿ ನೀಟ್ ಹಗರಣದ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು. ಬಳಿಕ ಜಿತೇಂದ್ರ ಸಿಂಗ್ ಕೇಂದ್ರದ ಹಿರಿಯ ಸಚಿವರೊಂದಿಗೆ ಚರ್ಚಿಸಿ ಮತ್ತೆ ರಾಹುಲ್ ಅವರನ್ನು ಭೇಟಿಯಾಗಿ ಲೋಕಸಭೆಯಲ್ಲಿ ದೀರ್ಘ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆಯಿತ್ತರು. “ ಸಚಿವ ಧರ್ಮೇಂದ್ರ ಪ್ರದಾನ್ ಕೂಡಲೇ ರಾಜೀನಾಮೆ ನೀಡಲಿ” ಎಂದು ರಾಹುಲ್ ಆಗ್ರಹಿಸಿದಾಗ ಏನಿದ್ದರೂ ಲೋಕಸಬೆಯಲ್ಲಿ ಚರ್ಚಿಸಿ ಎಂದಾಗ ಅದಕ್ಕೆ ಒಪ್ಪದ ರಾಹುಲ್ ಪ್ರಧಾನಿ ಇಲ್ಲಿಗೆ ಬರುವವರೆಗೆ ತಾನು ಬೆಂಬಲಿಗರ ಸಹಿತ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆಯಿತ್ತರು. ಆ ಬಳಿಕ ಪೊಲೀಸ್ ಕಾರ್ಯಾಚರಣೆÉಯಲ್ಲಿ ಎಲ್ಲರನ್ನೂ ಬಂಧಿಸಿ ಸ್ಥಳಾಂತರಿಸಲಾಯಿತು.
ಈ ನಡುವೆ ನೀಟ್ ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್ ೨೮ ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು, ಇಲ್ಲಿನ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವ ಅರ್ಜಿಗೆ ದೆಹಲಿ ಉಚ್ಚ ನ್ಯಾಯಾಲಯ ಸಮ್ಮತಿಯಿತ್ತಿದೆ.
ಇಂದಿನ ಈ ಎಲ್ಲ ಘಟನೆಗೂ ಮುನ್ನ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ‘ಭಾರತದ ಯುವಜನತೆಯ ಭವಿಷ್ಯವನ್ನು ನಾಶಪಡಿಸಿರುವ ಕಾರಣಕ್ಕಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು’ ಎಂದು ಪೋಸ್ಟ್ ಮಾಡುವ ಮೂಲಕ ಒತ್ತಾಯಿಸಿದರು.
ಈ ನಡುವೆ ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ ಖಂಡಿಸಿ ಮಂಗಳವಾರ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ನಿರಾಕರಣೆ ಮಾಡಿದರು. ‘ನಮ್ಮ ಮಕ್ಕಳಿಗೆ ನ್ಯಾಯ ಸಿಗಬೇಕೆ ಹೊರತು, ದೌರ್ಜನ್ಯವಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಮಾರ್ಮಿಕವಾಗಿ ಹೇಳಿದ್ದಾರೆ.