ಮಡಿಕೇರಿ, ಜು. ೨೨: ದೇವಟ್ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.
ದೇವಟ್ ಪರಂಬ್ನಲ್ಲಿ ಸಿಎನ್ಸಿ ವತಿಯಿಂದ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದ ಅವರು ಪುಷ್ಪ ನಮನದ ಮೂಲಕ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿದರು. ಸಿಎನ್ಸಿ ತನ್ನ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪುನರುಚ್ಚರಿಸುತ್ತಿದ್ದು, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆ ಪಿತೂರಿಯಿಂದ ನಡೆದ ಕೊಡವರ ರಾಜಕೀಯ ಹತ್ಯೆಗಳನ್ನು ಗುರುತಿಸಬೇಕು ಎಂದರು.
ಭಾರತೀಯ ಸಂವಿಧಾನದ ೪೯ನೇ ವಿಧಿ ಮತ್ತು ಯುನೆಸ್ಕೋದ ೧೯೬೪ ರ ವೆನಿಸ್ ಚಾರ್ಟರ್ ಅಡಿಯಲ್ಲಿ ಈ ದುರಂತಗಳನ್ನು ಅಂತರರಾಷ್ಟಿçÃಯ ಹೊಲೊಕಾಸ್ಟ್ ಸ್ಮಾರಕ, ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಹೊಲೊಕಾಸ್ಟ್ ಸ್ಮರಣಾರ್ಥ ಪಟ್ಟಿ ಮತ್ತು ಉಲುಗುಲಿ, ಮುಳ್ಳುಸೋಗೆ ಹಾಗೂ ಲಕ್ಡಿಕೋಟೆಯಲ್ಲಿರುವ ಕೊಡವ ಯುದ್ಧ ಕುರುಹುಗಳನ್ನು ಅಂತರರಾಷ್ಟಿçÃಯ ಯುದ್ಧ ಸ್ಮಾರಕಗಳಲ್ಲಿ ಸೇರಿಸುವ ಮೂಲಕ ಸ್ಮರಿಸಬೇಕು. ಕೊಡವ ಬುಡಕಟ್ಟು ಸಮುದಾಯವನ್ನು ಭಾರತೀಯ ಸಂವಿಧಾನದ ಅನುಸೂಚಿಗಳಲ್ಲಿ ಮತ್ತು ಆದಿಮಸಂಜಾತ ಜನರ ಹಕ್ಕುಗಳ ಮೇಲಿನ ವಿಶ್ವಸಂಸ್ಥೆಯ ಘೋಷಣೆಯಡಿಯಲ್ಲಿ ಆದಿಮಸಂಜಾತ ಏಕ-ಬುಡಕಟ್ಟು ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಗುಂಪಾಗಿ ಗುರುತಿಸಬೇಕೆಂದು ಎನ್.ಯು. ನಾಚಪ್ಪ ಒತ್ತಾಯಿಸಿದರು.
ಈ ಸಂದರ್ಭ ಮಂದಪAಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪAಡ ಸೂರಜ್, ಮಂಗೇರಿರ ಜಗದೀಶ್ ಹಾಗೂ ಕೊಟ್ಟುಕತ್ತೀರ ಬಾಬಿ ಪಳಂಗಪ್ಪ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.