ಕೂಡಿಗೆ, ಜು. ೨೨: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಪೋಷಕರ ಸಭೆ, ೬ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಶಾಲಾ ಸಂಸತ್ತು ಮಂತ್ರಿಮAಡಲದ ಪ್ರಮಾಣವಚನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಪ್ರಾಂಶುಪಾಲೆ ಕೆ.ಆರ್. ಭಾರತಿ ಉದ್ಘಾಟಿಸಿದರು. ಹೊಸದಾಗಿ ೬ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿಗಳಲ್ಲ, ನಮ್ಮೆಲ್ಲರ ಮಕ್ಕಳು. ಇದು ಕೇವಲ ವಸತಿ ಶಾಲೆ ಅಲ್ಲ, ಎಲ್ಲಾ ಮಕ್ಕಳ ಮನೆ. ಆದ್ದರಿಂದ ಆನಂದದಿAದ ಕಲಿತು ಒಳ್ಳೆಯ ಸ್ಥಾನಕ್ಕೆ ಏರಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಪೋಷಕರೊಂದಿಗೆ ಸಂವಾದ ನಡೆಸಿದರು.

ಶಾಲೆಯ ಶುಶ್ರೂಷಾಧಿಕಾರಿ ಮೀನಾ ಎಂ.ಆರ್. ಮಾತನಾಡಿ, ಮಕ್ಕಳ ಆರೋಗ್ಯದ ಸಂಪೂರ್ಣ ಜವಾಬ್ದಾರಿ ನಮ್ಮದು. ಮಕ್ಕಳಿಗೆ ಉತ್ತಮವಾದ ಆಹಾರ, ಬಟ್ಟೆ, ಪುಸ್ತಕ ಹಾಗೂ ಸೌಕರ್ಯಗಳನ್ನು ನೀಡುತ್ತಿದ್ದೇವೆ ಎಂದು ಪೋಷಕರಿಗೆ ತಿಳಿಸಿದರು.

ಶಾಲಾ ಶಿಕ್ಷಕಿ ಅಮೃತ ಕೆ.ವಿ. ಮತದಾನ ನಮ್ಮೆಲ್ಲರ ಹಕ್ಕು. ನಮ್ಮದು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ. ಮತವನ್ನು ಮತ್ತು ಮಗಳನ್ನು ಯೋಗ್ಯರಿಗೆ ನೀಡಬೇಕು. ಇಂದಿನ ಮಕ್ಕಳೇ ಮುಂದಿನ ಮತದಾರರು ಎಂದರು. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಮಂತ್ರಿಮAಡಲದ ಎಲ್ಲಾ ಮಂತ್ರಿಗಳಿಗೆ ಬ್ಯಾಡ್ಜ್ ಮತ್ತು ರಿಬ್ಬನ್‌ಗಳನ್ನು ಹಾಕುವುದರ ಮೂಲಕ ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪೋಷಕ ಶಿಕ್ಷಕ ಸಮಿತಿಗೆ ಆರನೇ ತರಗತಿಯ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಬಾಲಕಿಯರ ಕಡೆಯಿಂದ ಪ್ರಿಯ ಮತ್ತು ಬಾಲಕರ ಕಡೆಯಿಂದ ಬೋಪಯ್ಯ ಆಯ್ಕೆಯಾದರು. ೭ನೇ ತರಗತಿ ಕಡೆಯಿಂದ ವಿಶುಕುಮಾರ್ ಆಯ್ಕೆಯಾದರು.

ನಂತರ ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಪೋಷಕ ಶಿಕ್ಷಕ ಸಮಿತಿಯ ಸದಸ್ಯರಾದ ಶೋಭಾ, ದಿವ್ಯ, ಸ್ವಾತಿ, ಮೋಹನ್, ಶಿಕ್ಷಕರಾದ ದಿನೇಶಾಚಾರಿ, ದೊಡ್ಡಯ್ಯ, ಜಗದೀಶ್, ಹರಿಣಿ, ಅಶ್ವಥಿ, ಕವಿತಾ, ಮೇಘ ಮತ್ತು ಸಹಾಯಕರಾದ ಪಾರ್ವತಿ ಹಾಜರಿದ್ದರು.