ಮಡಿಕೇರಿ, ಜು. ೨೨: ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆಯಲ್ಲಿ ದೆಹಲಿಯ ಜಂಥರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಂಧನ ಹಾಗೂ ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದವರು ಇಂದು ಪ್ರತಿಭಟನೆ ನಡೆಸಿದರು.

ರಾಷ್ಟಾçದ್ಯಂತ ಜೈಲ್ ಬರೋ ಕರೆಯ ಹಿನ್ನೆಲೆಯಲ್ಲಿ ಮಡಿಕೇರಿಯ ಇಂದಿರಾಗಾAಧಿ ವೃತ್ತದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೀಟ್ ಅಕ್ರಮ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರುಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಕೇಂದ್ರ ಸರಕಾರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಅಕ್ರಮವನ್ನು ಖಂಡಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ವಿಪಕ್ಷದವರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ವಿಪಕ್ಷ ನಾಯಕರ ಬಂಧನ ಖಂಡನೀಯವೆAದು ಹೇಳಿದರು. ಈ ಹಿನ್ನೆಲೆಯಲ್ಲಿ ಇಂದು ರಾಷ್ಟçವ್ಯಾಪಿ ಜೈಲ್ ಬರೋ ಚಳವಳಿ ಹಮ್ಮಿಕೊಂಡಿದ್ದು., ನ್ಯಾಯಕ್ಕಾಗಿ ಜೈಲು ಸೇರಲು ಕೂಡ ತಯಾರಿರುವದಾಗಿ ಹೇಳಿದರು.

ರಸ್ತೆ ತಡೆ - ಬಂಧನ

ಪ್ರತಿಭಟನಾ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ಮಾಡಿದರು. ಮೊದಲೇ ತಯಾರಾಗಿ ಬಂದಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಪೊಲೀಸರು ಕರೆದೊಯ್ಯುತ್ತಿರುವಂತೆ ಕೆಲವರು ಅಲ್ಲಿಂದ ಜಾಗ ಖಾಲಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ತೆನ್ನೀರ ಮೈನಾ, ಮಾಧ್ಯಮ ಸಂವಹನ ಪ್ರತಿನಿಧಿ ಟಿ.ಪಿ.ರಮೇಶ್, ಪ್ರಮುಖರುಗಳಾದ ಹೆಚ್.ಎ. ಹಂಸ, ರಾಜೇಶ್ ಯಲ್ಲಪ್ಪ, ವಿ.ಪಿ.ಶಶಿಧರ್, ಸೂರಜ್ ಹೊಸೂರು, ಬೇಕಲ್ ರಮಾನಾಥ್, ವಿ.ಪಿ.ಸುರೇಶ್, ಅಬ್ದುಲ್ ರಜಾಕ್, ಟಿ.ಹೆಚ್.ಉದಯಕುಮಾರ್, ಆರ್.ಪಿ.ಚಂದ್ರಶೇಖರ್, ಮಿನಾಝ್ ಪ್ರವೀಣ್, ಫ್ಯಾನ್ಸಿ ಬೆಳ್ಯಪ್ಪ, ಪ್ರಕಾಶ್ ಆಚಾರ್ಯ, ಜಾನ್ಸನ್ ಪಿಂಟೋ, ನೆರವಂಡ ಉಮೇಶ್, ಲೀಲಾ ಶೇಷಮ್ಮ, ಸದಾ ಮುದ್ದಪ್ಪ, ಸುಜು ತಿಮ್ಮಯ್ಯ, ದಿನೇಶ್ ಶೆಟ್ಟಿ, ವಿ.ಕೆ.ಸತೀಶ್, ಮುದ್ದುರಾಜು, ಸ್ನೇಕ್ ಪೆರೇರ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.