ಸೋಮವಾರಪೇಟೆ, ಜು.೨೧: ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿರುವ ನಿವೇಶನ ರಹಿತರಿಗೆ ಮೊದಲ ಆದ್ಯತೆ ನೀಡಿ ನಿವೇಶನ ಹಂಚಿಕೆ ಮಾಡಬೇಕು ಎಂದು ನಿವೇಶನ ರಹಿತ ಹೋರಾಟ ಸಮಿತಿ ಹಾಗೂ ಎಐಟಿಯುಸಿ ಜಿಲ್ಲಾ ಶಾಖೆ ಆಗ್ರಹಿಸಿದೆ.
ಸೋಮವಾರಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ ಸೋಮಪ್ಪ ಅವರು, ‘ಸೂರಿಗಾಗಿ ಸಮರ ಹೆಸರಿನಲ್ಲಿ ಸಮಿತಿಯು ೨೦೦೫ರಿಂದ ಜಿಲ್ಲೆಯ ವೀರಾಜಪೇಟೆ, ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕುಗಳಲ್ಲಿ ನಿವೇಶನ ರಹಿತ ಆದಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಅರಣ್ಯ ಪ್ರದೇಶದ ಹೊಳೆ-ಪೈಸಾರಿ ನಿವಾಸಿಗಳು, ತೋಟದ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಬೇಕೆಂದು ವಿವಿಧ ಹೋರಾಟಗಳನ್ನು ನಡೆಸಿದೆ ಎಂದು ತಿಳಿಸಿದರು.
ಸೋಮವಾರಪೇಟೆ ಹೋಬಳಿಯಲ್ಲಿ ಪೈಸಾರಿ ಜಾಗವೇ ಇಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಂದ ತಿಳಿದು ಬಂದಿದೆ. ಸರ್ಕಾರದ ಪೈಸಾರಿ ಜಾಗವನ್ನೆಲ್ಲಾ ಭೂ ಮಾಲಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕೂಡಲೆ ಸರ್ಕಾರ ಶ್ರೀಮಂತ ಭೂಮಾಲೀಕರು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸಿ, ನಿವೇಶನ ರಹಿತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಮತ್ತು ಶ್ರಮಜೀವಿಗಳಾದ ಕಾರ್ಮಿಕರೆ ಭಾರತದ ಬೆನ್ನೆಲಬು. ಆದರೆ ಶ್ರಮಜೀವಿಗಳಿಗೆ ಮೂರು ಮುಕ್ಕಾಲು ಸೆಂಟ್ ನಿವೇಶನವನ್ನು ಪಡೆಯಲು ಇದುವರೆಗೆ ಸಾಧ್ಯವಾಗಿಲ್ಲ. ಕೂಲಿ ಕಾರ್ಮಿಕರಿಗೆ ಸ್ವಾತಂತ್ರö್ಯ ಸಿಕ್ಕೆ ಇಲ್ಲ. ಲೈನ್‌ಮನೆ, ಮುರುಕಲು ಗುಡಿಸಲಿನಲ್ಲೇ ವಾಸ ಮಾಡಬೇಕಿದೆ. ಶಾಸಕರು ಕಾರ್ಮಿಕರ ರಕ್ಷಣೆಗೆ ಬರಬೇಕು. ಪೈಸಾರಿ ಜಾಗದಲ್ಲಿ ಕಾರ್ಮಿಕರಿಗೆ ನಿವೇಶನ ನೀಡಬೇಕು ಎಂದು ಸೋಮಪ್ಪ ಹೇಳಿದರು.
ಕುಂಬೂರಿನಲ್ಲಿ ಕಾರ್ಮಿಕರಿಂದ ನಿವೇಶನಕ್ಕಾಗಿ ಧರಣಿ ನಡೆಯುತ್ತಿದೆ. ಆದರೆ ಜಾಗಕ್ಕೆ ಸಂಬAಧಿಸಿದ ಸತ್ಯವನ್ನು ಕೆಲ ನಾಯಕರು ಮುಚ್ಚಿಟ್ಟಿದ್ದಾರೆ. ಕಾರ್ಮಿಕರನ್ನು ದಿಕ್ಕುತಪ್ಪಿಸುವ ಕೆಲಸ ಆಗಬಾರದು. ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ನಿವೇಶನ ಸಿಗಬೇಕು ಎಂಬ ಬಗ್ಗೆ ಹಿಂದಿನಿAದಲೂ ಹೋರಾಟ ನಡೆಯುತ್ತಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಎಐಟಿಯುಸಿ ತಾಲೂಕು ಕಾರ್ಯದರ್ಶಿ ಪಿ.ಟಿ.ಸುಂದರ, ನಿರ್ದೇಶಕ ತನಿಯಪ್ಪ ಇದ್ದರು.