*ಗೋಣಿಕೊಪ್ಪ, ಜು. ೨೦: ಪೊನ್ನಂಪೇಟೆ ಸಂತ ಅಂತೋಣಿ ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಪಿ.ಯು ವಿಭಾಗದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ನಡೆಸಲಾಯಿತು.

ಪ್ರೌಢಶಾಲೆಯ ವಿದ್ಯಾರ್ಥಿ ನಾಯಕನಾಗಿ ಜೀವನ್ ಪಿ.ಸಿ ನಾಯಕಿಯಾಗಿ ಸಿಂಚನ್ ದೇಚಮ್ಮ ಮತ್ತು ಕಾಲೇಜು ನಾಯಕನಾಗಿ ಅರ್ಜುನ್ ಮಹೇಂದ್ರ ನಾಯಕಿಯಾಗಿ ದಿಶಾ ಪೊನ್ನಮ್ಮ ಕೆ.ಎಂ ಮತ್ತು ಇತರ ಸಹನಾಯಕರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೇ. ಮಾನ್ಸಿಗ್ನರ್ ಅಂತಪ್ಪ ಎಂವಿಕರ್ ಜನರಲ್ ಡಯಾಸಿಸ್ ಮೈಸೂರಿನವರು ಭಾಗವಹಿಸಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಜ್ಞೆ ಬೋಧಿಸಿದರು. ಶಾಲಾ ಸಂಚಾಲಕಿ ಮ್ಯಾನುವಲ್ ಡಿಸೋಜ, ಪ್ರಾಂಶುಪಾಲ ಶಂಭು ಕಾರ್ಯಪ್ಪ, ಮುಖ್ಯ ಶಿಕ್ಷಕಿ ರಜನಿ, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.