ಮಡಿಕೇರಿ, ಜು.೨೦: ಶ್ರೀಮಂಗಲ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ವಾರಿಸುದಾರರು ಇದ್ದಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ತಾ.೭ರಂದು ಸಂಜೆ ಟಿ.ಶೆಟ್ಟಿಗೇರಿಯ ಸೊಸೈಟಿ ಮುಂಭಾಗದಲ್ಲಿ ವ್ಯಕ್ತಿಯು ಕುಳಿತ್ತಿದ್ದನ್ನು ಗಮನಿಸಿದ ಅಲ್ಲಿನ ಸ್ಥಳೀಯರಾದ ಮಾಚಯ್ಯ ಎಂಬವರು ಅವರನ್ನು ಆಟೋದಲ್ಲಿ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ವ್ಯಕ್ತಿಯು ಮೃತಪಟ್ಟಿದ್ದಾಗಿ ಆಸ್ಪತ್ರೆಯಲ್ಲಿ ತಿಳಿದುಬಂದಿದ್ದು, ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವ್ಯಕ್ತಿಯು ೫೦ ರಿಂಧ ೫೫ ವರ್ಷ ಪ್ರಾಯದವರಾಗಿದ್ದು, ೫.೬ ಅಡಿ ಉದ್ದವಿದ್ದಾರೆ. ಇವರ ವಾರಿಸುದಾರರು ಯಾರಾದರು ಇದ್ದಲ್ಲಿ ಶ್ರೀಮಂಗಲ ಠಾಣೆ, ದೂ: ೦೮೨೭೪-೨೪೬೨೪೬ ಅನ್ನು ಸಂಪರ್ಕಿಸಬಹುದಾಗಿದೆ.