ಮಡಿಕೇರಿ, ಜು.೨೦: ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ೨೦೨೬-೨೭ನೇ ಸಾಲಿನ ಕನಕ ಕಾವ್ಯ ಗಮಕ ಸ್ಫರ್ಧೆಯನ್ನು ಏರ್ಪಡಿಸುತ್ತಿದೆ.
ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಪರಿಗಣಿಸಲಾಗುವುದು. ಗಮಕ ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ಸಂಘಟಿಸಲಾಗುವುದು.
ಬಾಲ ಪ್ರತಿಭೆ-೭ ರಿಂದ ೧೨ ವರ್ಷ, ಕಿಶೋರ ಪ್ರತಿಭೆ-೧೩ ರಿಂದ ೧೮ ವರ್ಷ, ಯುವ ಪ್ರತಿಭೆ-೧೯ ರಿಂದ ೩೦ ವರ್ಷ. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಕ್ರಮವಾಗಿ ಪ್ರಥಮ ಬಹುಮಾನ ರೂ.೨೦ ಸಾವಿರ, ದ್ವಿತೀಯ ಬಹುಮಾನ ರೂ.೧೫ ಸಾವಿರ, ತೃತೀಯ ಬಹುಮಾನ ರೂ.೧೦ ಸಾವಿರ ಮತ್ತು ಇಬ್ಬರಿಗೆ ಸಮಾಧಾನಕರ ಬಹುಮಾನ (ತಲಾ ರೂ.೫ ಸಾವಿರದಂತೆ) ಇರುತ್ತವೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧ್ಯಯನ ಕೇಂದ್ರದ ಜಾಲತಾಣದಲ್ಲಿ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪೂರ್ಣ ಮಾಹಿತಿಯನ್ನೊಳಗೊಂಡ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-೫೬೦೦೫೬ ಗೆ ಅರ್ಜಿಯನ್ನು ಅಂಚೆ/ಕೊರಿಯರ್ ಅಥವಾ ಇ-ಮೇಲ್ ಮೂಲಕ ಕಳುಹಿಸಿಕೊಡಬೇಕು ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗೆ ದೂ.ಸಂ. ೦೮೦-೨೨೧೧೩೧೪೭, ೯೭೪೩೫೪೫೮೬೫ ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.