ಮಡಿಕೇರಿ, ಜು.೨೦: ಶ್ರೀಮಂಗಲ ಠಾಣಾ ವ್ಯಾಪ್ತಿಯ ಕಾಯಿಮನೆ ಗ್ರಾಮದ ನಿವಾಸಿ ಸುರೇಶ ಟಿ.ಎ (೪೦) ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಭಾಗ್ಯ ಅವರು ಶ್ರೀಮಂಗಲ ಠಾಣೆಗೆ ದೂರು ನೀಡಿದ್ದಾರೆ.
ಸುರೇಶ ಅವರು ಕಳೆದ ಕೆಲ ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ತಾ.೭ ರಂದು ಬಾತ್‌ರೂಮ್‌ಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದವರು ಇನ್ನೂ ಕೂಡ ವಾಪಸ್ಸು ಬಂದಿಲ್ಲ, ಎಲ್ಲೆಡೆ ಹುಡಿಕಿದರೂ ಪತ್ತೆಯಾಗಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ವ್ಯಕ್ತಿ ಬಗ್ಗೆ ಮಾಹಿತಿ ದೊರೆತಲ್ಲಿ ಶ್ರೀಮಂಗಲ ಪೊಲೀಸ್ ಠಾಣೆ ಉಪನಿರೀಕ್ಷಕ, ದೂ:೦೮೨೭೪-೨೪೬೨೪೬ ಸಂಪರ್ಕಿಸಲು ಕೋರಿದೆ.