ಕುಶಾಲನಗರ, ಜು. ೨೦: ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕೊಡಗು ಮೂಲದ ಐಎಎಸ್ ಅಧಿಕಾರಿ ಎಸ್.ಎಸ್ ನಕುಲ್ ಅವರನ್ನು ಸರ್ಕಾರ ನೇಮಕ ಮಾಡಿದೆ.

ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್ ಅವರ ಪುತ್ರ ನಕುಲ್ ಅವರು ಕಳೆದ ೩ ವರ್ಷಗಳಿಂದ ಕೇಂದ್ರ ವಿತ್ತ ಸಚಿವರ ಕಾರ್ಯದರ್ಶಿ ಆಗಿದ್ದರು. ಇದಕ್ಕೂ ಮುನ್ನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇವರ ಕಾರ್ಯ ನಿರ್ವಹಣೆ ಗಮನಿಸಿ ಇದೀಗ ಕರ್ನಾಟಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಮ್ಮ ಸಚಿವಾಲಯದ ಕಾರ್ಯದರ್ಶಿ ಆಗಿ ನೇಮಕ ಮಾಡಿದ್ದಾರೆ. ಈ ಬಗ್ಗೆ ನಕುಲ್ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.