ಗೋಣಿಕೊಪ್ಪಲು. ಜು.೨೦: ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನಲ್ಲಿರುವ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ೪ ದಿನಗಳ ಕಾಲ ಅಂತರ್-ಶಾಲಾ ಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಓಪನ್ ಸೈಟ್ ರೈಫಲ್, ಪೀಪ್ ಸೈಟ್ ರೈಫಲ್ ಮತ್ತು ಪಿಸ್ತೂಲ್ ವಿಭಾಗಗಳಿದ್ದು, ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು ೬೭ ಶಾಲೆಗಳ ೨೦೧ ಕ್ರೀಡಾಪಟುಗಳು ಭಾಗವಹಿಸಿದ್ದರು. ೧೦ ಮೀಟರ್‌ನ ಈ ಸ್ಪರ್ಧೆಗಳಲ್ಲಿ ೧೪, ೧೭ ಮತ್ತು ೧೯ ವರ್ಷದ ವಯೋಮಿತಿಯ ಕ್ರೀಡಾಪಟುಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ, ಗಣ್ಯರಾದ ಪಿ.ಟಿ.ರಘುನಾಥ್, ಜೂರಿ, ಗೌರವ್ ದಿಲನ್, ರುಚಿಕ ಹಾಗೂ ಜಿ.ಎಂ.ಐಶ್ವರ್ಯ ಉಪಸ್ಥಿತರಿದ್ದರು.