ಮಡಿಕೇರಿ, ಜು. ೧೯: ಮುಂಗಾರಿನ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಕಕ್ಕಡ (ಆಟಿ) ಮಾಸ ಬಂತೆAದರೆ ಅದು ಮಳೆಗಾಲದ ಪರ್ವಕಾಲವಾಗಿರುತ್ತದೆ. ಈ ತನಕ ಆಗೊಮ್ಮೆ..ಹೀಗೊಮ್ಮೆ ಬಿಟ್ಟರೆ ಜಿಲ್ಲೆಯಲ್ಲಿ ಮುಂಗಾರಿನ ಆರ್ಭಟ ಕಂಡುಬAದಿಲ್ಲ. ಪುನರ್ವಸು ಮಳೆ ಆರಂಭದ ಒಂದೆರೆಡು ದಿನಗಳು ಜಿಲ್ಲೆಯಲ್ಲಿ ಭಾರೀ ಸುರಿದು ಹಲವು ಸಮಸ್ಯೆಗಳು. ಮುಖ್ಯವಾಗಿ ವಿದ್ಯುತ್ ಸಮಸ್ಯೆ ತಲೆದೋರಿತ್ತು. ಗ್ರಾಮೀಣ ಭಾಗಗಳಲ್ಲಿ ಎರಡು-ಮೂರು ದಿನಗಳಷ್ಟೆ ಕಂಡುಬAದ ಮಳೆಗಾಳಿಯ ತೀವ್ರತೆಯಿಂದ ಎದುರಾಗಿದ್ದ ವಿದ್ಯುತ್ ಸಮಸ್ಯೆ ಸರಿಯಾಗಲು ಹಲವಷ್ಟು ದಿನಗಳೇ ‘ಸೆಸ್ಕ್’ಗೆ ಬೇಕಾಯಿತು.
ಇದೀಗ ಕಕ್ಕಡ (ಆಟಿ) ಮಾಸ ಪ್ರಾರಂಭಗೊAಡಿದ್ದು, ಪ್ರಸ್ತುತ ಮಳೆಗಾಲದ ನೈಜತೆಯ ಛಾಯೆ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಪುನರ್ವಸು ಮಳೆ ತಾ. ೧೯ಕ್ಕೆ ಮುಕ್ತಾಯ ಕಂಡಿದ್ದು, ಇದೀಗ ತಾ. ೨೦ ರಿಂದ (ಇಂದಿನಿAದ) ಪುಷ್ಯ ಮಳೆ ನಕ್ಷತ್ರ ಆರಂಭಗೊಳ್ಳುತ್ತಿದೆ. ಪುಷ್ಯಮಳೆಯೂ ಕೊಡಗಿನಲ್ಲಿ ಭಾರೀ ಅಬ್ಬರ ತೋರುವ ಮಳೆ ನಕ್ಷತ್ರಗಳಲ್ಲಿ ಒಂದಾಗಿದೆ. ಪ್ರಸಕ್ತ ವರ್ಷದ ಮುಂಗಾರು ಹಿಂದಿನ ವರ್ಷಗಳಂತೆ ಕಂಡುಬಾರದೆ ಒಂದಷ್ಟು ದುರ್ಬಲವಾಗಿದೆ. ಇನ್ನೂ ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಮುಂದಿನ ದಿನಗಳಿಗೆ ಅತ್ಯಗತ್ಯವಾಗಿ ಬೇಕಾಗುವಂತಹ ನೀರಿನ ಮೂಲಕ್ಕೆ ಆಸರೆಯಾಗುವ ಜಲ ಎದ್ದಂತಿಲ್ಲ. ಕಳೆದ ವರ್ಷದ ಮಳೆಗಾಲಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆಯೂ ಇದೆ. ಈ ಬಾರಿ ಜನವರಿಯಿಂದ ಈ ತನಕ ಜಿಲ್ಲೆಯಲ್ಲಿ ೩೦ ಇಂಚುಗಳಷ್ಟೆ ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ ೭೧ ಇಂಚುಗಳಷ್ಟು ಮಳೆಯಾಗಿದ್ದು, ೪೧ ಇಂಚುಗಳಷ್ಟು ಕಡಿಮೆಯಿದೆ.
ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ೧೦೭ ಇಂಚುಗಳಷ್ಟು ಮಳೆಯಾಗಿತ್ತು. ಈ ಬಾರಿ ೪೨ ಇಂಚುಗಳಷ್ಟೇ ಆಗಿದ್ದು, ತಾಲೂಕಿನಲ್ಲಿ ೬೫ ಇಂಚು ಕಡಿಮೆ ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೬೭ ಇಂಚು, ಪೊನ್ನಂಪೇಟೆ ೬೮.೪೩, ಸೋಮವಾರಪೇಟೆ ೭೮, ಕುಶಾಲನಗರ ತಾಲೂಕಿನಲ್ಲಿ ೩೭ ಇಂಚು ಮಳೆ ದಾಖಲಾಗಿತ್ತು. ಪ್ರಸಕ್ತ ವರ್ಷ ಈ ಪ್ರಮಾಣ ವೀರಾಜಪೇಟೆ ೩೦, ಪೊನ್ನಂಪೇಟೆ ೩೧, ಸೋಮವಾರಪೇಟೆ ೩೨, ಕುಶಾಲನಗರ ತಾಲೂಕಿನಲ್ಲಿ ೧೩ ಇಂಚುಗಳಷ್ಟೆ ಇದೆ. ಇದೀಗ ಪುಷ್ಯಾರಂಭವಾಗಲಿದ್ದು, ಈ ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.