ಗೋಣಿಕೊಪ್ಪಲು, ಜು.೧೯: ಪಂದ್ಯAಡ ಬೆಳ್ಯಪ್ಪ ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕರೆ ನೀಡಿದರು.
ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಆಯೋಜಿಸಿದ್ದ, ಕೊಡಗಿನ ಗಾಂಧಿ ಎಂದೇ ಖ್ಯಾತರಾಗಿದ್ದ, ಸ್ವಾತಂತ್ರ್ಯ ಹೋರಾಟಗಾರ ಪಂದ್ಯAಡ ಬೆಳ್ಯಪ್ಪ ಅವರ ೬೦ನೇ ಪುಣ್ಯತಿಥಿಯ ಅಂಗವಾಗಿ ಗೋಣಿಕೊಪ್ಪಲು ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಪಂದ್ಯAಡ ಬೆಳ್ಯಪ್ಪ ಅವರು ತ್ಯಾಗ, ಆದರ್ಶಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು. ಕೊಡಗು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಪಂದ್ಯAಡ ಬೆಳ್ಯಪ್ಪ ಅವರು, ಸರ್ವಸ್ವವನ್ನೂ ತ್ಯಾಗಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರಾಗಿದ್ದಾರೆ ಎಂದರು.
ಯುಕೊ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿ, ಆದರ್ಶಪ್ರಾಯರಾಗಿ ಜೀವನದುದ್ದಕ್ಕೂ ಜೀವಿಸಿದ ಅಪ್ಪಟ ದೇಶಭಕ್ತ, ಗಾಂಧಿವಾದಿ ಪಂದ್ಯAಡ ಬೆಳ್ಯಪ್ಪ ಅವರಂತಹ ಆದರ್ಶಪ್ರಾಯರ ತ್ಯಾಗ ಬಲಿದಾನ, ಆದರ್ಶಗಳು ಇತಿಹಾಸದ ಪುಟಗಳಿಂದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಣ್ಮರೆಯಾಗುವ ಹಂತಕ್ಕೆ ಬಂದು ತಲುಪಿದೆ. ಅಲ್ಲದೆ ಒಂದೆಡೆ ಇಂತಹ ಕೊಡಗಿನ ನೈಜ ಇತಿಹಾಸಗಳು ತಿರುಚಲ್ಪಡುತ್ತಿದೆ. ಆದ್ದರಿಂದ ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕಾರ್ಯಕ್ಕೆ ನಾವು ನಾಂದಿ ಹಾಡಿದ್ದೇವೆ ಎಂದು ಹೇಳಿದರು.
ನಮ್ಮ ಬೇಡಿಕೆಗೆ ಸ್ಪಂದಿಸಿ ಶಾಸಕ ಪೊನ್ನಣ್ಣ ಅವರು ಇಲ್ಲಿ ಪಂದ್ಯAಡ ಬೆಳ್ಯಪ್ಪ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಪ್ರತಿಮೆಗೆ ಮೌಲ್ಯವನ್ನು ತುಂಬಬೇಕಾದ ಕೆಲಸ ನಮ್ಮಿಂದಾಗಬೇಕಿದೆ. ಈ ನಿಟ್ಟಿನಲ್ಲಿ ಕೊಡಗಿನ ಗಾಂಧಿ ಪಂದ್ಯAಡ ಬೆಳ್ಯಪ್ಪ ಅವರ ೬೦ನೇ ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಕ್ರೈಂ ವಿಭಾಗದ ವೆಂಕಟೇಶ್, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಯುಕೊ ಸದಸ್ಯರಾದ ಚೆಪ್ಪುಡೀರ ಪ್ರತಿಮಾ ಕಾರ್ಯಪ್ಪ, ಕಳ್ಳಿಚಂಡ ದೀನಾ ಉತ್ತಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಕುಂಜಿಲAಡ ಗ್ರೇಸಿ ಪೂಣಚ್ಚ, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಪುದಿಯೊಕ್ಕಡ ರಮ್ಯ ವಿಪನ್, ನೆಲ್ಲಮಕ್ಕಡ ಮಾದಯ್ಯ, ಚೆಪ್ಪುಡೀರ ಸಂಜು ಕರುಂಬಯ್ಯ, ಮಚ್ಚ್ಚಮಾಡ ರಮೇಶ್, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ, ಕಳ್ಳಿಚಂಡ ರಾಬೀನ್ ಸುಬ್ಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ , ಕೊಟ್ಟಂಗಡ ಮೊಣ್ಣಪ್ಪ, ಬೊಳ್ಳಿಯಂಗಡ ಬೋಪಣ್ಣ, ತೀತಿಮಾಡ ಬೋಸ್ ಅಯ್ಯಪ್ಪ, ಪುದಿಯೊಕ್ಕಡ ದಿನೇಶ್, ಕಳ್ಳಿಚಂಡ ಧ್ರುವ ಕಾರ್ಯಪ್ಪ, ಅಜ್ಜಿಕುಟ್ಟಿರ ಗಿರೀಶ್, ಅಜ್ಜಿಕುಟ್ಟಿರ ಸುನಿತ ಗಿರೀಶ್ ಸೇರಿದಂತೆ ಅನೇಕ ಗಣ್ಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.