ಮಡಿಕೇರಿ, ಜು. ೧೮: ಔಷಧೀಯ ಕ್ಷೇತ್ರದಲ್ಲಿ ಪದವಿ ಶಿಕ್ಷಣಕ್ಕೆ ಅರ್ಹತೆಗಿರುವ ರಾಷ್ಟಿçÃಯ ಪರೀಕ್ಷೆ ನೀಟ್‌ನಲ್ಲಿ ಕೆ.ಕೆ. ಸರ್ವಿಕ ಅವರು ೬೦೬ ಅಂಕಗಳಿಸಿ ೯೯.೫೮ ಪರ್ಸೆಂಟೈಲ್ ಪಡೆದಿದ್ದಾರೆ. ಈ ಮೂಲಕ ಆಲ್ ಇಂಡಿಯಾ ರ‍್ಯಾಂಕ್ ೮೮೮ ಪಡೆದಿದ್ದಾರೆ.
ಜನವರಿಯಲ್ಲಿ ನಡೆದ ಜಿಇಇ ಮೈನ್ಸ್ (ಜಂಟಿ ಪ್ರವೇಶ ಪರೀಕ್ಷೆ) ಯಲ್ಲಿ ೯೮.೩೧ ಪರ್ಸೆಂಟೈಲ್ ಪಡೆದುಕೊಂಡಿದ್ದ ಇವರು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ೯೭.೬೬% ಅಂಕ ಪಡೆದಿದ್ದರು.
ಮೂಲತಃ ನಾಪೋಕ್ಲು ಬೇತು ಗ್ರಾಮದ ನಿವಾಸಿ ಪ್ರಸ್ತುತ ಮಡಿಕೇರಿಯ ತಾಳತ್ತಮನೆಯಲ್ಲಿ ವಾಸವಿರುವ ಕೊಂಡಿರ ಕಿಶನ್ ಕಾರ್ಯಪ್ಪ ಹಾಗೂ ಕಾವ್ಯ ಕಾವೇರಮ್ಮ (ತವರುಮನೆ ಮೂಡೆರ) ಅವರ ಪುತ್ರಿಯಾಗಿರುವ ಸರ್ವಿಕ, ಬೆಳ್ತಂಗಡಿಯ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.