ಮಡಿಕೇರಿ, ಜು. ೧೭: ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ ೩೧೮೧ರ ಮೂರನೇ ಅತ್ಯಂತ ಹಿರಿಯ ಕ್ಲಬ್ ಆಗಿರುವ ರೋಟರಿ ಕ್ಲಬ್ ಮಡಿಕೇರಿಯ ೨೦೨೬-೨೭ನೇ ಸಾಲಿನ ೭೬ನೇ ಅಧ್ಯಕ್ಷರಾಗಿ ಮಡಿಕೇರಿಯ ಗೋಪಾಲ್ ಕಾಮತ್ ಸಂಸ್ಥೆಯ ಮಾಲೀಕ ಮನೋಹರ್ ಕಾಮತ್ ಅವರು ಪದಗ್ರಹಣ ಮಾಡಿದರು.
ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಡಾ.ಕೆ.ರವಿ ಅಪ್ಪಾಜಿ ಅವರು ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ರೊಟೇರಿಯನ್ನರು, ಕುಟುಂಬದ ಸದಸ್ಯರು ಹಾಗೂ ಅತಿಥಿಗಳು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.೨೦೨೬-೨೭ನೇ ಸಾಲಿನ ಗೌರವ ಕಾರ್ಯದರ್ಶಿಯಾಗಿ ಆದರ್ಶ್ ಸೋಮಣ್ಣ ಅಧಿಕಾರ ವಹಿಸಿಕೊಂಡರು. ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರೋಟರಿಯ ಸೇವಾ ಆದರ್ಶಗಳನ್ನು ಮತ್ತಷ್ಟು ಬಲಪಡಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.