(ವಿಶೇಷ ವರದಿ:
ಪ್ರಜ್ಞಾ ಜಿ.ಆರ್.)
ಮಡಿಕೇರಿ, ಜು. ೧೭: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಟೆ ಅಬ್ಬಿ ಜಲಪಾತ ಒಂದು ಸುಂದರವಾದ ಪ್ರಕೃತಿ ತಾಣ. ಈ ಪ್ರಕೃತಿಯ ತಾಣವನ್ನು ಅನುಭವಿಸಲು ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಡಿಕೇರಿ ಯಲ್ಲಿರುವ ಮಾಂದಲಪಟ್ಟಿ ಪ್ರವಾಸೀ ತಾಣದಿಂದ ಜೀಪಿನಲ್ಲಿ ಕೋಟೆ ಅಬ್ಬಿ ಜಲಪಾತಕ್ಕೆ ಪ್ರವಾಸಿಗರನ್ನು ಕರೆತರುವದು ವಾಡಿಕೆ. ಆದರೆ, ಈ ರಮಣೀಯ ತಾಣ ಗಂಡಾAತರಕ್ಕೆ ಕಾದುಕುಳಿತಂತಿದೆ.
ಈ ಜಲಪಾತವು ಊರಿನವರಿಗೆ ಪವಿತ್ರö್ಯತೆಯ ಹಾಗೂ ದೇವರ ಕೊಳವಾಗಿದೆಯಲ್ಲದೆ, ಇಲ್ಲಿ ಮೀನುಗಾರಿಕೆ, ಈಜುವಿಕೆ ಹಾಗೂ ಇನ್ನಿತರ ಮೋಜು ಮಸ್ತಿಯ ಚಟುವಟಿಕೆಗಳಿಗಾಗಿ ಮಾಡಿ-ಹೇಳಿದ ತಾಣವಲ್ಲ. ಈ ಜಲಪಾತ ಅಪಾಯಕಾರಿಯೂ ಹೌದು ಹಾಗೂ ಇಲ್ಲಿ ಹಲವಾರು ಜನರು ನೀರಿಗಿಳಿದು ನೀರಿನ ಅಪಾಯಕಾರಿ ಹರಿವಿಗೆ ಸಿಲುಕಿ ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೆ ಈ ಹಲವಾರು ದುಘರ್ಟನೆಗಳು ಸಂಭವಿಸಿದ್ದರೂ, ಇಲ್ಲಿ ಪ್ರವಾಸಿಗರಿಗೆ ಸುರಕ್ಷತೆಯೇ ಇಲ್ಲ. ಈ ಜಲಪಾತದಲ್ಲಿ ೨೦೨೨ ರÀಲ್ಲಿ ತೆಲಂಗಾಣ ರಾಜ್ಯದಿಂದ ಕೊಡಗಿಗೆ ಪ್ರವಾಸಕ್ಕೆ ಬಂದ ಮಕ್ಕಳೂ ಸೇರಿದಂತೆ ಮೂವರು ಜಲಪಾತಕ್ಕೆ ಇಳಿದು ಪ್ರಾಣಕಳೆದುಕೊಂಡರು. ಈ ದುರಂತ ಸಂಭವಿಸಿದ ನಂತರ ಜಲಪಾತದಲ್ಲಿ ಪಂಚಾಯಿತಿಯಿAದ ಸ್ವಲ್ಪ ಕಾಲ ಪ್ರವಾಸಿಗರ ಭದ್ರತೆಗೆ ಒಬ್ಬರನ್ನು ನೇಮಿಸಲಾಗಿತ್ತು. ಆದರೆ ಯಾವದೋ ತಿಳಿಯದ ಕಾರಣಗಳಿಂದ ಈ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ವಿಮುಕ್ತಿಗೊಳಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದಾದ ನಂತರ ಇಲ್ಲಿ ಪ್ರವಾಸೋದ್ಯಮಕ್ಕೆ ನಿಯಂತ್ರಿತ ಯೋಜನೆಗಳನ್ನೇ ರೂಪಿಸಿಲ್ಲ. ಪ್ರವಾಸಿಗರು ಈಜುವುದನ್ನು ತಡೆಯಲು ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಲಾಗಿದ್ದರೂ, ಸಂಬAಧಪಟ್ಟ ಅಧಿಕಾರಿಗಳು ಅದನ್ನು ಮೇಲ್ವಿಚಾರಣೆ ಮಾಡುತ್ತಿಲ್ಲ. ಅದೇ ರೀತಿ, ಜಲಪಾತಕ್ಕೆ ಭೇಟಿ ನೀಡುವ ನೂರಾರು ಪ್ರವಾಸಿಗರು ಯಾವುದೇ ನಿರ್ಬಂಧಗಳಿಲ್ಲದೆ ಜಲಪಾತ ಪ್ರದೇಶಕ್ಕೆ ಇಳಿಯುತ್ತಿದ್ದಾರೆ. ಸ್ಥಳೀಯ ಅಂಗಡಿಯವರು ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದರೂ, ಪ್ರವಾಸಿಗರನ್ನು ಬಲವಂತವಾಗಿ ತಡೆಯಲು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಸ್ಥಳದಲ್ಲಿ ಭದ್ರತಾ ಮಾರ್ಗದರ್ಶಿ ಇಲ್ಲದ ಕಾರಣ, ಅನೇಕ ಪ್ರವಾಸಿಗರು ಜಲಪಾತದ ಆಳವಾದ ಪ್ರದೇಶದಲ್ಲಿ ಜಳಕ ಮಾಡುತ್ತಿದ್ದಾರಲ್ಲದೆ, ಕೆಲವು ಪ್ರವಾಸಿಗರು ಸೋಪ್ ಬಳಸಿ ಈ ಪವಿತ್ರ ಜಲಪಾತದಲ್ಲಿ ಸ್ನಾನ ಮಾಡುತ್ತಾ ಜಲಪಾತವನ್ನು ಕಲುಷಿತಗೊಳಿಸುತ್ತಿದ್ದಾರೆ. ಮಕ್ಕಳು, ಹಿರಿಯರು ಹಾಗೂ ಯುವಕರು ಸೇರಿದಂತೆ ಅನೇಕ ಪ್ರವಾಸಿಗರು ಇಲ್ಲಿ ಈಜಲು ತೆÀರಳುತ್ತಿದ್ದು, ಇದು ಅನಾಹುತಕ್ಕೆ ಕರೆ ನೀಡುವಂತಿದೆ. ಹಿಂದಿನ ವರ್ಷಗಳಲ್ಲಿ ಜಲಪಾತದಲ್ಲಿ ಹಲವಾರು ಮಾರಕ ಅಪಘಾತಗಳು ವರದಿಯಾಗಿವೆ. ಆದರೂ, ಅಧಿಕಾರಿಗಳು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ.
ಮುಕ್ಕೋಡ್ಲು ನಿವಾಸಿಯಾದ ನಂದೀರ ಸಜನ್ ಅವರು ಇತ್ತೀಚೆಗೆ ಕೋಟೆ ಅಬ್ಬಿ ಜಲಪಾತದಲ್ಲಿ ನೀರಿನಲ್ಲಿ ಪ್ರಾಣವನ್ನೇ ಪಣಕ್ಕಿಡುತ್ತಿದ್ದ ಪ್ರವಾಸಿಗರನ್ನು ನೀರಿನಿಂದ ಹೊರಬರಲು ವಿನಂತಿಸಿದರೂ ಪ್ರಯೋಜನವಾಗದೆ, ಪ್ರವಾಸಿಗರ ನಿರ್ಲಕ್ಷö್ಯದ ವೀಡಿಯೋವನ್ನು ಚಿತ್ರೀಕರಿಸಿ ‘ಶಕ್ತಿ’ಯೊಂದಿಗೆ ಹಂಚಿಕೊAಡಿದ್ದಾರೆ. ಸಜನ್‌ರವರ ಸುರಕ್ಷತೆಯ ಮಾತುಗಳನ್ನು ಪ್ರವಾಸಿಗರು ಲೆಕ್ಕಿಸದೆ ಜಲಪಾತದ ಪಕ್ಕದಲ್ಲಿರುವ ಬಂಡೆಗಳನ್ನು ಏರಿ ಪ್ರವಾಸಿಗರು ಮೋಜು ಮಸ್ತಿಯನ್ನು ಮುಂದುವರೆಸಿದ್ದು, ವಿಪತ್ತನ್ನು ಆಹ್ವಾನಿಸುತ್ತಿದೆಯಲ್ಲದೆ, ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಕಪ್ಪುಚುಕ್ಕಿ ಬರುವ ಹಾಗೆ ಕಾಣುತ್ತಿದೆ.
ಜಿಲ್ಲಾಧಿಕಾರಿ ಸಮರ್ಪಕ ಸ್ಪಂದನ
ಕೋಟೆ ಅಬ್ಬಿ ಜಲಪಾತದಲ್ಲಿನ ಈ ಅಪಾಯಕಾರೀ ಸ್ಥಿತಿ ಕುರಿತು ‘ಶಕ್ತಿ’ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರ ಗಮನಕ್ಕೆÀ ತಂದಾಗ ಅವರು ತಕ್ಷಣ ಸ್ಪಂದಿಸಿದ್ದಾರೆ. ಈ ಸ್ಥಳದಲ್ಲಿ ಅಪಾಯ ಸಂಭವಿಸಿದAತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸೀ ಮಿತ್ರನನ್ನು ನಿಯೋಜಿಸುವುದಾಗಿ ಭರವಸೆಯಿತ್ತರು. ಅಲ್ಲದೆ, ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಿರುವುದರಿಂದ ಪೊಲೀಸ್ ವ್ಯವಸ್ಥೆ ಕಲ್ಪಿಸುವುದಾಗಿಯೂ ತಿಳಿಸಿದರು.