ಕೊಡ್ಲಿಪೇಟೆ, ಜು. ೧೭: ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಎಸ್‌ಐಆರ್ ಪ್ರಕ್ರಿಯೆ ಉಸ್ತುವಾರಿ ವಿ.ಆರ್.ಸುದರ್ಶನ್ ಅವರು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬಿಎಲ್‌ಓಗಳೊಂದಿಗೆ ಚರ್ಚಿಸಿ, ಎಸ್‌ಐಆರ್ ಪ್ರಗತಿ ಮತ್ತು ಸಮಸ್ಯೆಗಳ ಕುರಿತು ಆಲಿಸಿದರು.

ಪಂಚಾಯಿತಿಯಲ್ಲಿ ಮತದಾರರ ಮಾಹಿತಿ ಕೇಂದ್ರ ಎಂಬ ನಾಮಫಲಕ ಆಳವಡಿಸದ ಬಗ್ಗೆ ಆಡಳಿತ ಅಧಿಕಾರಿಗಳು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳೊAದಿಗೆ ಕರೆ ಮಾಡಿ ಮಾತನಾಡಿ, ರಾಜ್ಯ ಚುನಾವಣಾಧಿಕಾರಿಗಳು ಎಲ್ಲಾ ಪಂಚಾಯಿತಿಗಳಲ್ಲಿ ಮತದಾರರ ಸೇವಾ ಕೇಂದ್ರ ಮಾಡಲಾಗಿದೆ ಎಂದಿದ್ದಾರೆ. ಆದರೆ ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ ಅಂತಹ ವ್ಯವಸ್ಥೆ ಮಾಡಿಲ್ಲ. ತಕ್ಷಣ ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಿ, ಮತದಾರರಿಗೆ ಸಹಕಾರ ಮಾಡಬೇಕೆಂದು ತಿಳಿಸಿದರು.

ನಂತರ ಮತದಾರರೊಂದಿಗೆ ಚರ್ಚಿಸಿದ ಸಂದರ್ಭ, ಕೊಡ್ಲಿಪೇಟೆಯ ಭಾಗ ಸಂಖ್ಯೆ ೧೭ರಲ್ಲಿರುವ ಕೆಲವು ಮತದಾರರ ಎನ್ಯೂಮರೇಷನ್ ಅರ್ಜಿಗಳು ೧೬ ಮತ್ತು ೧೩ರಲ್ಲಿ ಬಂದಿವೆ. ಇದನ್ನು ಭರ್ತಿಮಾಡಿಕೊಟ್ಟರೆ ಸಂಬAಧಿಕರೊAದಿಗೆ ಬರದೆ ಪ್ರತ್ಯೇಕವಾಗಿ ಮತದಾರರ ಪಟ್ಟಿಯಲ್ಲಿ ಬರುತ್ತದೆ ಎಂದು ತಮ್ಮ ಸಮಸ್ಯೆಗಳನ್ನು ತಿಳಿಸಿದರು

ಕೆಲ ಬಿ.ಎಲ್.ಓ.ಗಳು ಮೇಲಧಿಕಾರಿಗಳ ಒತ್ತಡದ ಹಿನ್ನೆಲೆಯಲ್ಲಿ ಫಾರ್ಮ್ಗಳನ್ನು ಅವರುಗಳೇ ತುಂಬಿ ತರಾತುರಿಯಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರಿಂದ ಮತದಾರನಿಗೆ ಸಮಸ್ಯೆಯಾಗಲಿದೆ ಎಂದರು.

ಇದನ್ನು ಸಂಬAಧಪಟ್ಟ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಸುದರ್ಶನ್ ತಿಳಿಸಿದರು.

ಈ ಸಂದರ್ಭ ಕೆ.ಪಿ.ಸಿ.ಸಿ. ರಾಜ್ಯ ವಕ್ತಾರ ಹೆಚ್.ಎಸ್.ಚಂದ್ರಮೌಳಿ, ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಡಾ.ಉದಯ್‌ಕುಮಾರ್, ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್ ಎಂ.ಎA, ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಅದ್ಯಕ್ಷ ಬಿ.ಕೆ.ಯತೀಶ್, ಬಿ.ಎಲ್.ಓ. ದೀಪಕ್ , ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಲತಾ, ಅಣ್ಣಪ್ಪ ಸೇರಿದಂತೆ ಇತರರು ಇದ್ದರು.