ಕಣಿವೆ, ಜು. ೧೭ : ಕುಶಾಲನಗರದ ವಿವಿಧೆಡೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗಳ ಕುರಿತು ಉಪವಿಭಾಗಾಧಿಕಾರಿಯೂ ಆದ ಕುಶಾಲನಗರ ಪುರಸಭೆ ಆಡಳಿತಾಧಿಕಾರಿ ನಿತಿನ್ ಚಕ್ಕಿ ಪರಿಶೀಲನೆ ನಡೆಸಿದರು.
ಶೇ. ೫೦ಕ್ಕಿಂತ ಕಡಿಮೆ ಪ್ರಗತಿಯಲ್ಲಿರುವ ವಾರ್ಡ್ಗಳಿಗೆ ಖುದ್ದು ತೆರಳಿದ ಉಪವಿಭಾಗಾಧಿಕಾರಿಗಳು ಅಲ್ಲಿನ ಬಿಎಲ್‌ಓ ಹಾಗೂ ಬಿಎಲ್‌ಎಗಳೊಂದಿಗೆ ಎಸ್‌ಐಆರ್ ಕುರಿತಾದ ಪರಾಮರ್ಶೆ ನಡೆಸಿದರು. ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ರತನ್ ಕುಮಾರ್, ಪುರಸಭೆ ಕಂದಾಯ ಅಧಿಕಾರಿ ರಾಮು, ಧನಂಜಯ, ಬಿಎಲ್‌ಒ ಟಿ.ಎಸ್. ಸೌಭಾಗ್ಯ, ಬಿಎಲ್‌ಒ ಮಧು ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.