ಮಡಿಕೇರಿ, ಜು.೧೭: ಅಕ್ಕಪಡೆ ಸಿಬ್ಬಂದಿಗಳು ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಪನ್ಯ ಗ್ರಾಮದ ಲೈನ್ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸಿದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯಿದೆ, ಬಾಲಕಾರ್ಮಿಕರ ನಿಷೇಧ ಕಾಯ್ದೆ, ಕನಿಷ್ಟ ವೇತನ, ಶಿಕ್ಷಣದ ಹಕ್ಕು ಹಾಗೂ ಮಹತ್ವ, 'ಬೇಟಿ ಬಚಾವೋ-ಬೇಟಿ ಪಡಾವೋ', ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು.

ತುರ್ತು ಸಂದರ್ಭದಲ್ಲಿ ಬಳಸಬೇಕಾದ, ಸಹಾಯವಾಣಿ ಸಂಖ್ಯೆಗಳಾದ ೧೧೨, ೧೦೯೮, ೧೮೧, ೧೯೩೦, ಗಳ ಬಗ್ಗೆ ಅರಿವು ಮೂಡಿಸಿದರು.