ವರದಿ - ಚಂದ್ರಮೋಹನ್

ಕುಶಾಲನಗರ, ಜು. ೧೭: ವಿಶ್ವವಿಖ್ಯಾತ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿAದ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಮುಖ ಕಂಡು ಬಂದಿದೆ.

ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅದರಲ್ಲೂ ವಾರಾಂತ್ಯದಲ್ಲಿ ೫ ಸಾವಿರಕ್ಕೂ ಅಧಿಕ ಪ್ರವಾಸಿಗರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದ ದುಬಾರೆ ಪ್ರವಾಸಿ ಕೇಂದ್ರ ಮೇ ತಿಂಗಳ ಆರಂಭದಲ್ಲಿ ನಡೆದ ದುರಂತ ಘಟನೆಯಿಂದ ಆನೆ ಶಿಬಿರ ಪ್ರವಾಸಿಗರ ಭೇಟಿಗೆ ನಿರ್ಬಂಧ ಹಿನ್ನಲೆಯಲ್ಲಿ ಪ್ರವಾಸಿಗರು ಈ ಕಡೆ ಸುಳಿಯುವುದು ಬಹುತೇಕ ಕಡಿಮೆಯಾಗಿದೆ.

ಎರಡು ಸಾಕಾನೆಗಳ ನಡುವೆ ನಡೆದ ಕಾಳಗದಲ್ಲಿ ಚೆನ್ನೆöÊ ಮೂಲದ ಮಹಿಳೆಯೊಬ್ಬರನ್ನು ತುಳಿದು ಹತ್ಯೆ ಮತ್ತು ತೀವ್ರ ಗಾಯಗೊಂಡ ಆನೆ ಒಂದರ ಸಾವು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣದಿಂದಲೇ ದುಬಾರೆ ಶಿಬಿರಕ್ಕೆ ಸೇರಿದಂತೆ ರಾಜ್ಯದ ಎಲ್ಲಾ ಆನೆ ಶಿಬಿರಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿತ್ತು. ಈ ಘಟನೆಯಿಂದ ರಾಜ್ಯದ ಎಲ್ಲಾ ಶಿಬಿರಗಳು ಪ್ರವಾಸಿಗರಿಗೆ ನಿರ್ಬಂಧ ಹೇರುವುದರ ಜೊತೆಗೆ ಎಸ್.ಓ.ಪಿ. ಅನುಷ್ಠಾನಗೊಳಿಸಲು ಆದೇಶ ಹೊರಡಿಸಿತ್ತು. ಇದೀಗ ಎಸ್‌ಓಪಿ ಸರಕಾರದಿಂದ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿಗೆ ರವಾನೆಯಾಗಿದ್ದು ಅದನ್ನು ಅನುಷ್ಠಾನಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶಿಬಿರದಲ್ಲಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಶಿಬಿರದಲ್ಲಿ ಬ್ಯಾರಿಕೇಡ್‌ಗಳ ಅಳವಡಿಕೆ ಸೇರಿದಂತೆ ಪ್ರವಾಸಿಗರ ಸಂಪೂರ್ಣ ಸುರಕ್ಷತೆ ಹಾಗೂ ಆನೆಗಳಿಗೆ ಉಂಟಾಗುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಯಾವುದೇ ಸಂದರ್ಭ ಪ್ರವಾಸಿಗರು ಆನೆಯ ಸಮೀಪ ಹೋಗದಂತೆ ಕಟ್ಟುನಿಟ್ಟಿನ ಸೂಚನೆಗಳು ಎಸ್‌ಓಪಿಯಲ್ಲಿ ನಿಯಮಗಳನ್ನು ಅಳವಡಿಸಲಾಗಿದ್ದು ಈ ಸಂಬAಧ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಅಭಿಷೇಕ್ ಅಧಿಕಾರಿಗಳೊಂದಿಗೆ ಸೂಕ್ತ ಕ್ರಮಗಳು ಮತ್ತು ನಿಯಮಗಳ ಬಗ್ಗೆ ಚರ್ಚಿಸುತ್ತಿದ್ದು ದುಬಾರೆ ಆನೆ ಶಿಬಿರದಲ್ಲಿ ಸಿದ್ಧತೆ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದುಬಾರೆ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗುವುದು. ಆದರೆ ಕಡ್ಡಾಯವಾಗಿ ಇಲಾಖೆಯ ನಿಯಮಗಳನ್ನು ಪ್ರವಾಸಿಗರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಅಭಿಷೇಕ್ “ಶಕ್ತಿ”ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕ್ಷೇತ್ರ ಶಾಸಕ ಮಂತರ್ ಗೌಡ, ಆದಷ್ಟು ಶೀಘ್ರದಲ್ಲಿ ದುಬಾರೆ ಆನೆ ಶಿಬಿರ ಪ್ರವಾಸಿಗರಿಗೆ ಮುಕ್ತವಾಗಲಿದೆ, ಆದರೆ ಪ್ರವಾಸಿಗರ ರಕ್ಷಣೆ ಸಂಬAಧ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿAದ ದುಬಾರೆಯ ಪ್ರವಾಸಿ ಚಟುವಟಿಕೆಗಳು ಸಂಪೂರ್ಣ ಕುಸಿದಿದ್ದು ಶೇ. ೩೦ರಷ್ಟು ಪ್ರವಾಸಿಗರ ಭೇಟಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ ಎಂದು ಅಲ್ಲಿನ ಉದ್ಯಮಿ ಕೆ.ಎಸ್. ರತೀಶ್ ತಿಳಿಸಿದ್ದಾರೆ.

ಇದರೊಂದಿಗೆ ನದಿಯಲ್ಲಿ ನೀರಿನ ಹರಿವಿನ ಕೊರತೆ ಕಾರಣ ರ‍್ಯಾಫ್ಟಿಂಗ್ ಸಾಹಸ ಕ್ರೀಡೆ ಕೂಡ ಆರಂಭಗೊಳ್ಳದೆ ಕೇವಲ “ಸ್ಟಿಲ್ ವಾಟರ್ ರಾಫ್ಟಿಂಗ್” ಮಾತ್ರ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ೮೫ ರಾಷ್ಟçಗಳು ಪ್ರವಾಸಿಗರ ಕೊರತೆಯಿಂದ ನದಿಯ ತಟ ಸೇರಿವೆ ಎಂದು ತಿಳಿಸಿದ್ದಾರೆ. ಜಲಾನಯನ ಪ್ರದೇಶಗಳಲ್ಲಿ ಮಳೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ನದಿಯ ನೀರಿನ ಪ್ರಮಾಣ ಏರಿಕೆ ಕಂಡು ಬಂದಿತ್ತು. ಇದೀಗ ಎರಡು ದಿನಗಳಿಂದ ನೀರಿನ ಹರಿವಿನ ಕೊರತೆ ನದಿಯಲ್ಲಿ ಕಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಿAದ ಶಿಬಿರ ಬಂದ್ ಆಗಿರೋದು ಮತ್ತು ನದಿಯಲ್ಲಿ ನೀರಿನ ಹರಿವಿನ ಕೊರತೆಯಿಂದಾಗಿ ನೂರಾರು ಸಂಖ್ಯೆಯ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಉದ್ಯಮಿ ನಂಗಾರು ಜಗ ತಿಳಿಸಿದ್ದಾರೆ. ಪ್ರವಾಸ ಕೇಂದ್ರದ ಪಾರ್ಕಿಂಗ್ ಬಿಡ್‌ದಾರರು ಕಳೆದ ಎರಡು ತಿಂಗಳಿAದ ವಾಹನಗಳು ಆಗಮಿಸದೆ ಈ ಬಾರಿ ನಷ್ಟಕ್ಕೆ ಒಳಗಾಗಿರುವ ಬಗ್ಗೆ ತಮ್ಮ ಅಳಲನ್ನು ‘ಶಕಿ’್ತಯೊಂದಿಗೆ ತೋಡಿಕೊಂಡಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದ ಕಾರಣ ರ‍್ಯಾಫ್ಟಿಂಗ್ ಸಾಹಸ ಕ್ರೀಡೆಗೆ ರಾಜ್ಯ ಮತ್ತು ಇತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು ರ‍್ಯಾಫ್ಟಿಂಗ್ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು ಎಂದು ನೆನಪಿಸಿದರು.

ಈ ನಡುವೆ ಮೇ ತಿಂಗಳ ೧೮ ರಂದು ದುಬಾರೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣದ ಕಾಮಗಾರಿಗೆ ಅಂದಿನ ಅರಣ್ಯ ಸಚಿವರು ಶಂಕುಸ್ಥಾಪನೆ ನೆರವೇರಿಸಿದ್ದು ತೂಗು ಸೇತುವೆ ಕಾಮಗಾರಿ ಆರಂಭಗೊAಡಿದೆ. ಆದರೆ ತೂಗು ಸೇತುವೆ ಸರದಾರ ಗಿರೀಶ್ ಭಾರದ್ವಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರ ಕಾಮಗಾರಿಯನ್ನು ಪ್ರಸಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಇನ್ನೊಂದಡೆ ನದಿಯಲ್ಲಿ ನೀರಿನ ಹರಿವಿನ ಪ್ರಮಾಣದ ಅಲ್ಪ ಏರಿಕೆಯಾದ ಕಾರಣ ಕಾಮಗಾರಿಗೆ ತೊಡಕು ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಶಿಬಿರದಲ್ಲಿ ೩೦ ಆನೆಗಳಿದ್ದು ಅವುಗಳನ್ನು ಮಾವುತ, ಕಾವಾಡಿಗರು ಆರೈಕೆ ಮಾಡುತ್ತಿದ್ದಾರೆ. ಸಮೀಪದ ಜಂಗಲ್ ಲಾಡ್ಜ್ ರೆಸಾರ್ಟ್ನಲ್ಲಿ ಮಾತ್ರ ಪ್ರವಾಸಿಗರಿಗೆ ತಂಗಲು ಅವಕಾಶ ಕಲ್ಪಿಸಿದ್ದು, ಅರಣ್ಯದಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿದೆ. ಶಿಬಿರದಲ್ಲಿ ಆನೆ ಕಾಳಗ ನಡುವೆ ಮಹಿಳೆ ಮೃತಪಟ್ಟ ಘಟನೆಯ ನಂತರ ಸಫಾರಿ ಮುಂದುವರಿದಿದ್ದು ಬಳಿಕ “ಶಕ್ತಿ”ಯಲ್ಲಿ ಬಂದ ವರದಿಯನ್ನು ಆಧರಿಸಿ ಸಫಾರಿ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರೆಸಾರ್ಟ್ನ ಅತಿಥಿಗಳಿಗೆ ಅರಣ್ಯದಲ್ಲಿ ನಡೆಸುವ ಸಫಾರಿ ಚಟುವಟಿಕೆಗಳಿಗೂ ಎಸ್‌ಓಪಿ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.