ಮಡಿಕೇರಿ, ಜು. ೧೫: ನಿರ್ಗತಿಕ ವೃದ್ಧರೊಬ್ಬರು ತೀವ್ರ ಅಸ್ವಸ್ಥರಾಗಿ ಅಸಹಾಯಕತೆಯಲ್ಲಿದ್ದ ಸಂದರ್ಭ ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಅವರು ಸಕಾಲದಲ್ಲಿ ಸ್ಪಂದಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ಐಟಿಐ ಜಂಕ್ಷನ್ ಬಳಿ ವೃದ್ಧರೊಬ್ಬರು ಅಸ್ವಸ್ಥರಾಗಿರುವ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ದೊರೆತ ತಕ್ಷಣ ಕಲಾವತಿ ಅವರು ಸ್ಥಳಕ್ಕೆ ತೆರಳಿ ವೃದ್ಧನಿಗೆ ಒಳ್ಳೆಯ ಬಟ್ಟೆ ನೀಡಿ, ಕಾಲು ನೋವಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿ ಆಶ್ರಮಕ್ಕೆ ಸೇರಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.