ಸಿದ್ದಾಪುರ, ಜು. ೧೫: ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಜಾಗ ಗುರುತಿಸಿದರೂ ಕೂಡ ಪುನರ್ವಸತಿ ಮರೀಚಿಕೆಯಾಗಿ ಶೋಚನೀಯ ಸ್ಥಿತಿಯಲ್ಲಿ ಸಂತ್ರಸ್ತರು ಜೀವನ ಸಾಗಿಸುತ್ತಿರುವುದು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಂಡು ಬಂದಿದೆ.
೨೦೧೯ರಲ್ಲಿ ಮಹಾಮಳೆಗೆ ಪ್ರವಾಹಕ್ಕೆ ಸಿಲುಕಿ ತಮ್ಮ ಮನೆಗಳನ್ನು ಕಳೆದುಕೊಂಡು ನೆಲ್ಲಿಹುದಿಕೇರಿ ಗ್ರಾಮದ ನದಿ ತೀರದ ನಿವಾಸಿಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡರು. ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆಯುತ್ತಿದ್ದ ಸಂತ್ರಸ್ತರು ತಮಗೆ ಪುನರ್ವಸತಿ ಕಲ್ಪಿಸಿ ಕೊಡುವಂತೆ ಒತ್ತಾಯಿಸಿದ ಮೇರೆಗೆ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳು ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅರೆ ಕಾಡು ರಸ್ತೆಯಲ್ಲಿರುವ ಅಭ್ಯತ್ ಮಂಗಲ ಗ್ರಾಮಕ್ಕೆ ಸೇರಿದ ಎಂಟು ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ವಶಕ್ಕೆ ಪಡೆದುಕೊಂಡು ಸಂತ್ರಸ್ತ ಕುಟುಂಬಗಳಿಗೆ ನಿವೇಶನ ನೀಡಲಾಗುವುದೆಂದು ಅಂದಿನ ಶಾಸಕರ ಸಮ್ಮುಖದಲ್ಲಿ ಭರವಸೆ ನೀಡಿದ್ದರು.
ಅಲ್ಲದೆ ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳ ಸಮ್ಮುಖದಲ್ಲಿ ಸಂತ್ರಸ್ತರಿಗೆ ಟೋಕನ್‌ಗಳನ್ನು ವಿತರಿಸಲಾಗಿತ್ತು. ಆದರೆ ಇದೀಗ ೬ ವರ್ಷಗಳು ಕಳೆದರೂ ಕೂಡ ಪುನರ್ವಸತಿ ಕಲ್ಪಿಸಿಕೊಡದೆ ಜಿಲ್ಲಾಡಳಿತ ನಿರ್ಲಕ್ಷö್ಯ ತಾಳಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಳೆಯ ಸರ್ಕಾರ ಬದಲಾಗಿ ಹೊಸ ಸರ್ಕಾರ ಬಂದು ಈ ಭಾಗದ ಶಾಸಕರಾಗಿರುವ ಡಾ.ಮಂತರ್ ಗೌಡ ಆಯ್ಕೆಯಾಗಿ ಮೂರು ವರ್ಷಗಳು ಕಳೆದಿದ್ದರೂ ಪುನರ್ವಸತಿಗೆ ಗುರುತಿಸಿದ್ದ ಜಾಗದಲ್ಲಿ ಸಂತ್ರಸ್ತರಿಗೆ ಸೂರು ನೀಡುವ ಯಾವುದೇ ಯೋಜನೆಯನ್ನು ರೂಪಿಸದೆ ಇರುವುದರಿಂದ ಇದೀಗ ಸಂತ್ರಸ್ತರಿಗೆ ಗುರುತಿಸಿದ ಪುನರ್ವಸತಿ ಜಾಗವೂ ಕಾಡುಪಾಲಾಗಿದೆ. ಕಾಡು ಗಿಡಗಳು ಬೆಳೆದು ದಟ್ಟ ಕಾಡು ಆವರಿಸಿದೆ. ಕಂದಾಯ ಇಲಾಖೆಯು ಗುರುತಿಸಿದ ಜಾಗದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ಪುನರ್ವಸತಿ ಯೋಜನೆಯ ಪ್ರಕ್ರಿಯೆಗಳು ನಡೆಯದೆ ನೆನೆಗುದಿಗೆ ಬಿದ್ದಿವೆ.
ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಜನಪ್ರತಿನಿಧಿಗಳು ಕೂಡ ಕೇವಲ ಚುನಾವಣೆಯ ಸಂದರ್ಭದಲ್ಲಿ ಭರವಸೆಗಳನ್ನು ನೀಡುತ್ತಾ ರಾಜಕೀಯದಲ್ಲಿ ಕಾಲಾರಣ ಮಾಡುತ್ತಿದ್ದಾರೆ ಹಾಗೂ ಸಂತ್ರಸ್ಥರ ಸಂಕಟಕ್ಕೆ ಸ್ಪಂದಿಸದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುವ ಸಂದರ್ಭ ಕಂದಾಯ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ.
ಆದರೆ ಸಂಬAಧಪಟ್ಟ ಜಿಲ್ಲಾಡಳಿತ ಪುನರ್ವಸತಿ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಸಂತ್ರಸ್ತರು ಎಲ್ಲಾ ದಾಖಲಾತಿಗಳನ್ನು ಸ್ಥಳೀಯ ಗ್ರಾಮದಲ್ಲಿ ಹೊಂದಿಕೊAಡಿದ್ದರೂ ಈ ಬಗ್ಗೆ ಹಲವಾರು ಬಾರಿ ಈ ಭಾಗದ ಶಾಸಕರ ಗಮನಕ್ಕೂ ತಂದರೂ ಕೂಡ ಈವರೆಗೂ ಶಾಶ್ವತ ಸೂರು ಮರೀಚಿಕೆಯಾಗಿದೆ. ೨೦೧೯ರಲ್ಲಿ ಮನೆ ಕಳೆದುಕೊಂಡ ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುAಡಿ, ಬೆಟ್ಟದ ಕಾಡು, ನಲ್ವತ್ತೇಕರೆಯ ನದಿ ತೀರದ ನಿವಾಸಿಗಳು ಕಳೆದ ಆರು ವರ್ಷಗಳಿಂದ ಮುರಿದು ಬಿದ್ದಿರುವ ಮನೆಗಳಲ್ಲಿ ಹಾಗೂ ಪ್ಲಾಸ್ಟಿಕ್ ಶೆಡ್ಡ್ಗಳಲ್ಲಿ ತಮ್ಮ ಸಂಸಾರದೊAದಿಗೆ ಆತಂಕದಲ್ಲಿ ಜೀವನ ಮಾಡುತ್ತಿದ್ದಾರೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ ಎಂದು ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಕೇವಲ ಒಂದು ಕಿರು ಸೇತುವೆ ನಿರ್ಮಾಣವಾಗಿದೆ ಹೊರತು ಯಾವುದೇ ಕಾಮಗಾರಿಗಳು ನಡೆಯದಿರುವುದು ಗೋಚರಿಸಿದೆ.
ನದಿ ತೀರದ ನಿವಾಸಿಗಳು ಗಾಳಿ ಮಳೆಗೆ ಪ್ರವಾಹದ ಸಂದರ್ಭದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಕುಟುಂಬಗಳು ಇಂದಿಗೂ ನದಿ ತೀರದಲ್ಲಿ ಮನೆಗಳನ್ನು ಕಳೆದುಕೊಂಡು ದಿನ ದೂಡುತ್ತಿವೆ. ಪ್ರತಿವರ್ಷ ಪ್ರವಾಹ ಸಂದರ್ಭದಲ್ಲಿ ನದಿ ದಡವು ನೀರಿನ ಹೊಡತಕ್ಕೆ ಸಿಲುಕಿ ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆ ಮಾಡದೇ ಇರಲು ಕಾರಣವೇನೆಂದು ಜಿಲ್ಲಾಡಳಿತವೇ ಸ್ಪಷ್ಟಪಡಿಸಬೇಕಿದೆ. ಆರು ವರ್ಷಗಳಿಂದ ಜಾಗ ಗುರಿತಿಸಿದ್ದರು ಕೂಡ ಮನೆ ನಿರ್ಮಾಣದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ತರಾತುರಿಯಲ್ಲಿ ಖಾಸಗಿ ವ್ಯಕ್ತಿಯಿಂದ ಸರ್ಕಾರಿ ಭೂಮಿಯನ್ನು ಪಡೆದುಕೊಂಡಿತ್ತು. ಇನ್ನೇನು ನಮಗೆ ಶಾಶ್ವತ ಸೂರು ಲಭಿಸಬಹುದೆಂದು ಕಾಯುತ್ತಿದ್ದ ಸಂತ್ರಸ್ತರು ಇಂದಿಗೂ ಕಾಯುತ್ತಲೇ ಇರುವುದು ದುರಾದೃಷ್ಟಕರವಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ನಡೆಸಿದ ಆಡಳಿತ ಮಂಡಳಿಯವರು ಕೂಡ ನದಿ ತೀರದ ನಿವಾಸಿಗಳ ಮತ ಪಡೆದು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೆ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರು ಕೂಡ ಈ ಬಗ್ಗೆ ಶಾಸಕರ ಗಮನಕ್ಕೆ ತರುವುದಾಗಲಿ ಜಿಲ್ಲಾಡಳಿತಕ್ಕೆ ಒತ್ತಾಯಪಡಿಸುವುದಾಗಲಿ ಮಾಡದೆ ನಿರ್ಲಕ್ಷ ತೋರುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದೆ. ಮುಂದೊAದು ದಿನ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ ಹಿಂದೆ ಸಂಭವಿಸಿದ ಘಟನೆಗಳು ಮರುಕಳಿಸಿ ಅನಾಹುತಗಳು ಸಂಭವಿಸುವ ಮೊದಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಬೇಕಿದೆ.
ಇದಲ್ಲದೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿ ಗೋಡು ಮತ್ತು ಗುಹ್ಯ ಗ್ರಾಮದಲ್ಲಿ ಕೂಡ ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ನಿವೇಶನವನ್ನು ನೀಡುವ ಮೂಲಕ ಅವರಿಗೂ ಕೂಡ ಶಾಶ್ವತ ಸೂರು ಕಲ್ಪಿಸಿಕೊಟ್ಟಲ್ಲಿ ಮುಂದೆ ಆಗುವ ಸಮಸ್ಯೆಗಳು ತಪ್ಪಲಿವೆ. ಈ ಭಾಗದ ಸಂತ್ರಸ್ತರು ಕೂಡ ತಮಗೆ ಶಾಶ್ವತ ಸೂರು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ. ತಮ್ಮ ಕಾಲಾವಧಿ ಮುಕ್ತಾಯವಾದರೂ ಕೂಡ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗಾದರೂ ಭಯವಿಲ್ಲದೆ ಜೀವನ ಮಾಡಲು ಒಂದು ಸೂರನ್ನು ಸರಕಾರ ನೀಡುವುದೇ ಎಂಬದು ನದಿ ತೀರದ ನಿವಾಸಿಗಳಲ್ಲಿ ಪ್ರಶ್ನೆಯಾಗಿದೆ.
ಮಾಲ್ದಾರೆಯಲ್ಲಿ ಜಾಗ ಗುರುತು
ಕರಡಿ ಗೋಡು ಮತ್ತು ಗುಹ್ಯ ಗ್ರಾಮದ ನದಿ ತೀರದ ಸಂತ್ರಸ್ತರಿಗೆ ಈ ಹಿಂದಿನ ಜಿಲ್ಲಾಧಿಕಾರಿ ಅವರು ವೀರಾಜಪೇಟೆ ತಾಲೂಕಿನಲ್ಲಿ ಪುನರ್ವಸತಿಗಾಗಿ ಜಾಗ ಗುರುತಿಸಿದ್ದರು. ಆದರೆ ಇಲ್ಲಿನ ನಿವಾಸಿಗಳು ವೀರಾಜಪೇಟೆಯ ಬಿಟ್ಟಂಗಾಲ ಸಮೀಪ ತಮಗೆ ದೂರವಾದ ಕಾರಣ ಹಾಗೂ ಅಲ್ಲಿ ಕೂಲಿ ಕೆಲಸ ಸಮರ್ಪಕವಾಗಿ ಸಿಗುವುದಿಲ್ಲ ಎಂದು ಹೇಳಿ ಆ ಜಾಗವನ್ನು ನಿರಾಕರಿಸಿ ಜಿಲ್ಲಾಡಳಿತ ನೀಡಿದ ಟೋಕನ್‌ಗಳನ್ನು ಹಿಂತಿರುಗಿಸಿದರು. ಬಳಿಕ ಶಾಸಕ ಪೊನ್ನಣ್ಣ ಅವರು ಆಸಕ್ತಿ ವಹಿಸಿ ಮಾಲ್ದಾರೆಯಲ್ಲಿ ಸುಮಾರು ೧೦ ಎಕರೆ ಜಾಗ ಗುರುತಿಸಿದರು .ಈ ಜಾಗದ ಸಂಬAಧ ಸರಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಎಂಬ ಮಾಹಿತಿ ಲಭಿಸಿದೆ. ಒಂದು ವೇಳೆ ಈ ಜಾಗ ಲಭಿಸಿದಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಲಭಿಸುವ ಸಾಧ್ಯತೆ ಕಂಡುಬAದಿದೆ. ಶಾಸಕ ಪೊನ್ನಣ್ಣ ಅವರು ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಆಸಕ್ತಿಯನ್ನು ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ಕೂಡಲೆ ಪುನರ್ವಸತಿ ಕಲ್ಪಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕೆAದು ಗ್ರಾಮಸ್ಥರ ಆಗ್ರಹವಾಗಿದ್ದು, ಜನಪ್ರತಿನಿಧಿಗಳು ಸ್ಪಂದಿಸುವರೇ ಎಂದು ಕಾದು ನೋಡಬೇಕು.