ಪೊನ್ನಂಪೇಟೆ, ಜು. ೧೫: ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದನಕರೆ ಹಾಡಿಗೆ ತೆರಳುವ ನೂತನ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಧರ್ಮಜ ಉತ್ತಪ್ಪ ರೂ. ೭೫ ಲಕ್ಷಗಳಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಸ್ಥಳೀಯರ ಬೇಡಿಕೆಗೆ ಸ್ಪಂದಿಸಿರುವ ಶಾಸಕರು ಅನುದಾನವನ್ನು ಒದಗಿಸಿದ್ದಾರೆ ಎಂದರು.
ಈ ಸಂದರ್ಭ ವಲಯ ಅಧ್ಯಕ್ಷ ಚಿಮ್ಮಣ್ಣಮಾಡ ರವಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ನಾಲ್ಕೇರಿ ವಲಯ ಅಧ್ಯಕ್ಷ ತಿತೀರ ಕಟ್ಟಿ ಕಾರ್ಯಪ್ಪ, ಕೆ.ಬಾಡಗ ಪಂಚಾಯಿತಿ ಸದಸ್ಯ ಬೋಪಣ್ಣ, ಡಿಸಿಸಿ ಸದಸ್ಯರು, ಹಿರಿಯರಾದ ನಟರಾಜ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಪಕ್ಷದ ಮುಖಂಡರಾದ ವಿಶು, ಮಲ್ಲಪನೇರ ನಿಲ್ಲು ಗಣಪತಿ, ಚಂಗಪ್ಪ, ಮುಕ್ಕಾಟಿರ ಮಧು, ಸ್ಥಳೀಯರಾದ ಸುರೇಶ್, ತಮ್ಮು, ರಘು, ಮಧು, ಇನ್ನಿತರರು ಉಪಸ್ಥಿತರಿದ್ದರು.