ಸಿದ್ದಾಪುರ, ಜು. ೧೫ : ಮರಿಯಾನೆಯೊಂದು ತನ್ನ ತಾಯಿಯಿಂದ ಬೇರ್ಪಟ್ಟು ಸಣ್ಣ ಗುಂಡಿಗೆ ಬಿದ್ದ ಘಟನೆ ನೆಲ್ಲಿ ಹುದಿಕೇರಿ ಗ್ರಾಮದ ನಲ್ವತ್ತೇಕರೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆ ಗ್ರಾಮದ ನಿವಾಸಿ ಮಣಿ ಎಂಬವರ ಮನೆಯ ಸಮೀಪ ಹಂದಿ ಗೂಡಿಗಾಗಿ ತೆಗೆಯಲಾದ ಸಣ್ಣ ಗುಂಡಿಗೆ ಅಂದಾಜು ೫ ವರ್ಷ ಪ್ರಾಯದ ಮಾರಿಯಾನೆಯೊಂದು ರಾತ್ರಿ ಸುಮಾರು ೮.೩೦ರ ಸಮಯದಲ್ಲಿ ಕಾಲು ಜಾರಿ ಬಿದ್ದಿತು ಎನ್ನಲಾಗಿದೆ.

ಈ ಮರಿಯಾನೆ ಗುಂಡಿಗೆ ಬಿದ್ದ ಬಳಿಕ ಮೇಲೇಳಲು ಸುಮಾರು ಒಂದು ಗಂಟೆ ಕಾಲ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಬಳಿಕ ತಾಯಿ ಆನೆ ಮರಿಯಾನೆ ಬಳಿ ಬಂದು ಗುಂಡಿಯಿAದ ಮರಿಯನ್ನು ಮೇಲಕ್ಕೆತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆ ಗುಂಡಿಗೆ ಬಿದ್ದ ಬಗ್ಗೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವಷ್ಟರಲ್ಲೇ ತನ್ನ ತಾಯಿಯ ಸಹಕಾರದಿಂದ ಹೆಣ್ಣು ಮರಿಯಾನೆ ಮೇಲೆದ್ದು ತನ್ನ ತಾಯಿ ಹಾಗೂ ಇತರ ಕಾಡಾನೆಗಳೊಂದಿಗೆ ಸೇರಿಕೊಂಡಿತು. ಬಳಿಕ ಕುಶಾಲನಗರ ವಲಯ ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ಹಾಗೂ ಸಿಬ್ಬಂದಿ ಸುತ್ತಮುತ್ತ ಕಾಫಿ ತೋಟದಲ್ಲಿ ಪರಿಶೀಲನೆ ನಡೆಸಿದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)ಸAದರ್ಭ ೩ ಕಾಡಾನೆಗಳು ಇರುವುದು ಕಂಡುಬAದಿದ್ದು ಇವುಗಳು ಸಮೀಪದ ತೋಟಕ್ಕೆ ತೆರಳಿರುವ ಬಗ್ಗೆ ತಿಳಿದುಬಂದಿದೆ. ಸ್ಥಳೀಯ ಗ್ರಾಮಸ್ಥರು ಮಾತನಾಡಿ ನೆಲ್ಲಿ ಹುದಿಕೇರಿ ಗ್ರಾಮದ ಬರಡಿ ಮತ್ತು ನಲ್ವತ್ತೇಕರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈ ಹಿಂದೆ ಕಾರ್ಮಿಕ ಮಹಿಳೆಯ ಮೇಲೆ ಹಾಡಹಗಲೇ ದಾಳಿ ನಡೆಸಿದ ಘಟ£ಯೂ ಕೂಡ ನಡೆದಿತ್ತು. ಸಂಜೆಯಾಗುತ್ತಲೇ ವಸತಿ ಪ್ರದೇಶಗಳಲ್ಲಿ ಕಾಡಾನೆಗಳು ಸುತ್ತಾಡುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಕೂಡಲೆ ಅರಣ್ಯ ಇಲಾಖೆ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.

- ವಾಸು