ಐಗೂರು,ಜು ೧೫: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸೋಮವಾರಪೇಟೆ ವತಿಯಿಂದ ಐಗೂರಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಡಿಕ್ಕಿ ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಮೇಲ್ವಿಚಾರಕರಾದ ಲಕ್ಷö್ಮಣ್ ಮಾತನಾಡಿ ಆರೋಗ್ಯ ಸರಿ ಇಲ್ಲದಿದ್ದರೆ ಮನುಷ್ಯನಿಗೆ ಸಂಪತ್ತು ಇದ್ದರೂ ಪ್ರಯೋಜನವಿಲ್ಲ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಪೂಪತಿ ಮಾತನಾಡಿ ನರಗಳ ತೊಂದರೆಯಿAದ ಕಣ್ಣಿನ ದೃಷ್ಟಿಗೆ ತೊಂದರೆಯಾಗುವ ಕಾರಣ ನರಗಳ ತಪಾಸಣೆ ಮಾಡಿಸಬೇಕು ಎಂದರು. ಶಿಬಿರದಲ್ಲಿ ಒಟ್ಟು ೧೬೦ ಜನರಿಗೆ ಮಧುಮೇಹ ಪರೀಕ್ಷೆ, ಮತ್ತು ಕಣ್ಣಿನ ತಪಾಸಣೆ ನಡೆಸಿ ಕೆಲವರಿಗೆ ಕನ್ನಡಕವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಲಕ್ಷö್ಮಣ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವನ, ಸೇವಾ ಪ್ರತಿನಿಧಿ ಚೆನ್ನಮ್ಮ, ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ , ಸಮುದಾಯ ಆರೋಗ್ಯ ಅಧಿಕಾರಿ ಮನೋಜ್ ಎ. ಆರ್, ಆರೋಗ್ಯ ನಿರೀಕ್ಷಣಾಧಿಕಾರಿ ಶಿವಪ್ಪ ಎಚ್ . ಆರೋಗ್ಯ ಸಹಾಯಕಿ ಎಂ.ಪೂಪತಿ ನೇತ್ರ ಪರೀಕ್ಷಕರಾದ ಬಸವರಾಜು ಎಸ್ ಎನ್, ಮುನಾವರ್ ಪಾಷಾ, ಆಶಾ ಕಾರ್ಯಕರ್ತೆಯರು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು. ಜಾನಕಿ ಪ್ರಾರ್ಥಿಸಿದರೆ, ಕವನ ಸ್ವಾಗತಿಸಿ, ವಂದಿಸಿದರು.