ಬೆಂಗಳೂರು, ಜು. ೧೪: ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಂI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ (ಃIಇಅ) ನಲ್ಲಿ ನಡೆದ ‘ಗೂಗಲ್ ಐ/ಓ ಕನೆಕ್ಟ್ ಇಂಡಿಯಾ ೨೦೨೬’ (ಉoogಟe I/ಔ ಅoಟಿಟಿeಛಿಣ Iಟಿಜiಚಿ ೨೦೨೬) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ಮಹತ್ವದ ಘೋಷಣೆ ಮಾಡಿದರು. ಇದರೊಂದಿಗೆ, ಸ್ಟಾರ್ಟ್ಅಪ್‌ಗಳು ಮತ್ತು ಉದ್ಯಮಗಳ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ವಿಶೇಷ ‘ಂI ಹಬ್’ (ಂI ಊub) ಅನ್ನು ಇನ್‌ಕ್ಯುಬೇಶನ್ ಕೇಂದ್ರವಾಗಿ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಭಾರತದ ಮೊದಲ ಸರ್ಕಾರಿ ಂI ವಿಶ್ವವಿದ್ಯಾಲಯ ಜಾಗತಿಕ ಮಟ್ಟದ ಂI ಪ್ರತಿಭೆಗಳನ್ನು ರೂಪಿಸಲು, ಸುಧಾರಿತ ಸಂಶೋಧನೆಗಳನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಬಲವಾದ ಸಮನ್ವಯ ಸಾಧಿಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನವೋದ್ಯಮಗಳು (Sಣಚಿಡಿಣuಠಿs), ತಂತ್ರಜ್ಞಾನ ಕಂಪನಿಗಳು ಮತ್ತು ಸಂಶೋಧಕರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಕೈಗೊಳ್ಳಲು ಇದು ಅತ್ಯಾಧುನಿಕ ಇನ್‌ಕ್ಯುಬೇಶನ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಶಿಕ್ಷಕರಿಗೆ ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಲು ಂI ಆಧಾರಿತ ಸಹಾಯಕ ಪರಿಕರಗಳ ಬಳಕೆ, ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ಸುಧಾರಿತ ವೈದ್ಯಕೀಯ ಚಿಕಿತ್ಸಾ ಬೆಂಬಲ, ರೈತರಿಗೆ ನೈಜ ಸಮಯದ (ಖeಚಿಟ-ಣime) ನಿಖರ ಕೃಷಿ ಸಲಹೆಗಳನ್ನು ನೀಡುವುದು, ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಅತ್ಯಂತ ವೇಗವಾಗಿ ಮತ್ತು ಗೌರವಯುತವಾಗಿ ತಲುಪಿಸುವುದು, ಸ್ಥಳೀಯ ಸಣ್ಣ ಉದ್ಯಮಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಂI ತಂತ್ರಜ್ಞಾನದ ನೆರವು ನೀಡುವುದು ವಿಶ್ವ ವಿದ್ಯಾಲಯದ ಉದ್ದೇಶ ಎಂದಿದ್ದಾರೆ.

ಕಳೆದ ಎರಡು ದಶಕಗಳಿಂದ ಬೆಂಗಳೂರಿನಲ್ಲಿ ಗೂಗಲ್ ಸಂಸ್ಥೆಯ ಕೊಡುಗೆಯನ್ನು ಶ್ಲಾಘಿಸಿದ ಡಿ.ಕೆ. ಶಿವಕುಮಾರ್ ಅವರು, ಮುಖ್ಯವಾಗಿ ೫ ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಗೂಗಲ್ ಸಂಸ್ಥೆಗೆ ಆಹ್ವಾನ ನೀಡಿದರು.

ಭಾರತದ ಒಟ್ಟು ಸಾಫ್ಟ್ವೇರ್ ರಫ್ತಿನಲ್ಲಿ ಕರ್ನಾಟಕವು ಸುಮಾರು ಶೇ. ೪೦ ರಷ್ಟು ಕೊಡುಗೆ ನೀಡುತ್ತಿದ್ದು, ಬೆಂಗಳೂರು ೧೭,೦೦೦ ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ಹಾಗೂ ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಉಅಅs) ನೆಲೆಯಾಗಿದೆ.

ಸುಧಾರಿತ ಕಂಪ್ಯೂಟಿAಗ್, ಡೇಟಾ ಸೆಂಟರ್‌ಗಳು ಮತ್ತು ಸಂಶೋಧನೆಗೆ ಅಗತ್ಯವಿರುವ ಡಿಜಿಟಲ್ ಮೂಲಸೌಕರ್ಯಗಳನ್ನು ಸರ್ಕಾರ ಇನ್ನಷ್ಟು ಬಲಪಡಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.