ಮಡಿಕೇರಿ,ಜು.೧೪: ಇಲ್ಲಿಗೆ ಸಮೀಪದ ಮಕ್ಕಂದೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ನಗದು ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್.ಎಲ್. ರಮೇಶ್ ಅವರನ್ನು ಬ್ಯಾಂಕ್ ವತಿಯಿಂದ ಬೀಳ್ಕೊಡಲಾಯಿತು.
ರಮೇಶ್ ಅವರು ಮಡಿಕೇರಿ, ಚೆನ್ನಯ್ಯನಕೋಟೆ, ಕುಶಾಲನಗರ, ಕೊಡ್ಲಿಪೇಟೆ, ಹೆಬ್ಬಾಲೆ, ಸೋಮವಾರಪೇಟೆಗಳಲ್ಲಿ ಸೇವೆ ಸಲ್ಲಿಸಿ, ಮಕ್ಕಂದೂರು ಶಾಖೆಯಲ್ಲಿ ೨೦೨೩ರಿಂದ ೨೦೨೬ರ ಜೂನ್ ೩೦ರವರೆಗೆ ಸೇವೆ ಸಲ್ಲಿಸಿದ್ದರು. ಮಕ್ಕಂದೂರು ಶಾಖಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಡಿಕೇರಿ ವಲಯ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ವಿನಾಯಕ್, ಮಕ್ಕಂದೂರು ಶಾಖಾ ವ್ಯವಸ್ಥಾಪಕ ಪ್ರಣವ್ ಸಸಿಧರನ್, ರಮೇಶ್ ಅವರ ಕುಟುಂಬಸ್ಥರು, ಬ್ಯಾಂಕ್‌ನ ಗ್ರಾಹಕರು, ಸಿಬ್ಬಂದಿ ಪಾಲ್ಗೊಂಡಿದ್ದರು.