ವೀರಾಜಪೇಟೆ, ಜು. ೧೪: ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಅನಾವರಣಗೊಳಿಸಲು ಮತ್ತು ಸೂಕ್ತ ವೇದಿಕೆ ಒದಗಿಸಲು ನೂತನ ಕ್ರೀಡಾ ಸಂಸ್ಥೆಯೊAದು ವೀರಾಜಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಉತ್ಸವ ೨೦೨೬ನ್ನು ತಾ. ೧೯ ರಂದು ಆಯೋಜಿಸುತ್ತಿದೆ ಎಂದು ಕ್ರೀಡಾ ಆಯೋಜಕರಾದ ತಿರುಶ್, ಸಚಿನ್, ಇರ್ಷಾದ್ ಮತ್ತು ಸಂತೋಷ್ ಅವರುಗಳು ತಿಳಿಸಿದ್ದಾರೆ.
ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ವೀರಾಜಪೇಟೆ ನಗರದಲ್ಲಿ ಜಿಲ್ಲೆಗೆ ಸೀಮಿತವಾದಂತೆ ಚಿಕ್ಕಪೇಟೆ ಒಳಾಂಗಣ ಕ್ರೀಡಾಂಗಣದಲ್ಲಿ ಯು.ಬಿ.ಸಿ ಕೊಡಗು ಬ್ಯಾಡ್ಮಿಂಟನ್ ಫೆಸ್ಟ್ ೨೦೨೬ ತಾ. ೧೯ ರಂದು ನಡೆಯಲಿದೆ. ಕ್ರೀಡಾ ಉತ್ಸವದ ಅಯೋಜಕ ತಿರುಶ್ ಮಾತನಾಡಿ, ಪಂದ್ಯಾಟಗಳು ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಕ್ಷೇತ್ರಕ್ಕೆ ಒದಗಿಸುವ ನಿಟ್ಟಿನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕೀಡಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಪುರುಷರ ವಿಭಾಗ ಓಪನ್ ಡಬಲ್ಸ್, ಮೆನ್ಸ್ ಬಿಗಿನೆರ್ಸ್ ಇಂಟರ್ಮಿಡೆಟ್, ಮೆನ್ಸ್ ೩೫ ವರ್ಷ ಮೇಲ್ಪಟ್ಟು, ಮೆನ್ಸ್ ೮೦ ವರ್ಷ ಮೇಲ್ಪಟ್ಟು ಮತ್ತು ಮಹಿಳಾ ವಿಭಾಗದಲ್ಲಿ ವುಮೇನ್ಸ್ ಡಬಲ್ಸ್ ವಿವಿಧ ವಿಭಾಗಗಳಲ್ಲಿ ಪಂದ್ಯಾಟಗಳು ನಡೆಯಲಿದೆ ಎಂದು ಹೇಳಿದರು.
ಸಚಿನ್ ಮಾತನಾಡಿ, ಪಂದ್ಯಾಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುವುದು. ನೋಂದಾಯಿತ ತೀರ್ಪುಗಾರರು ಪಂದ್ಯಾಟದ ತೀರ್ಪು ನೀಡಲಿದ್ದಾರೆ. ಪಂದ್ಯಾಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಭೋಜನ ಮತ್ತು ಸಂಜೆಯ ಉಪಹಾರ ಆಯೋಜಕರ ವತಿಯಿಂದ ಏರ್ಪಡಿಸಲಾಗಿದೆ ಎಂದರು. ಕ್ರೀಡಾಕೂಟದಲ್ಲಿ ಭಾಗವಹಿಸಲು ಮತ್ತು ನೋಂದಾಯಿಸಲು ತಾ. ೧೭ ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ತಿರುಶ್ ೯೯೦೨೨೬೭೧೨೮ ಮತ್ತು ಸಚಿನ್ ೬೩೬೩೬೧೬೬೦೮ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.