ಮಡಿಕೇರಿ, ಜು. ೧೪: ಪೊನ್ನಂಪೇಟೆ ಸಂತ ಅಂತೋಣಿ ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಪಿ.ಯು ವಿಭಾಗದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ಪ್ರೌಢಶಾಲೆಯ ವಿದ್ಯಾರ್ಥಿ ನಾಯಕನಾಗಿ ಜೀವನ್ ಪಿ, ನಾಯಕಿಯಾಗಿ ಸಿಂಚನ್ ದೇಚಮ್ಮ ಮತ್ತು ಕಾಲೇಜು ನಾಯಕನಾಗಿ ಅರ್ಜುನ್ ಮಹೇಂದ್ರ, ನಾಯಕಿಯಾಗಿ ದಿಶಾ ಪೊನ್ನಮ್ಮ ಕೆ.ಎಂ ಆಯ್ಕೆಯಾದರು. ಇವರುಗಳೊಂದಿಗೆ ಇತರೆ ಸಹ ನಾಯಕರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೆ.ಮಾನ್ಸಿಗ್ನರ್ ಅಂತಪ್ಪ ಎಂ, ಭಾಗವಹಿಸಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಪ್ರತಿಜ್ಞೆ ಬೋಧಿಸಿದರು. ವಿದ್ಯಾಸಂಸ್ಥೆಗೆ ನೂತನವಾಗಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ರೆ ಫಾ ಮ್ಯಾನುವಲ್ ಡಿಸೋಜ, ಪ್ರಾಂಶುಪಾಲರಾದ ಶಂಭು ಕಾರ್ಯಪ್ಪ, ಮುಖ್ಯ ಶಿಕ್ಷಕಿ ರಜನಿ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.