ಚೆಟ್ಟಳ್ಳಿ, ಜು. ೧೪: ೨೦೨೬-೨೦೨೭ನೇ ಸಾಲಿನ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಹಾಗೂ ತರಗತಿ ಪ್ರತಿನಿಧಿಗಳ ಚುನಾವಣೆ ಇತ್ತೀಚೆಗೆ ನಡೆಯಿತು.
ಪ್ರತಿ ತರಗತಿಯಿಂದ ತಲಾ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ ಕಲಾ ವಿಭಾಗದಿಂದ ಅಭಿಜಿತ್ ಹೆಚ್.ಎನ್ ಮತ್ತು ನವ್ಯ ಹೆಚ್.ಜಿ, ದ್ವಿತೀಯ ಕಲಾ ವಿಭಾಗದಿಂದ ವೇದಾಂತ್ ಪೂವಯ್ಯ ಎಂ.ಟಿ .ಮತ್ತು ಪ್ರಜ್ಞಾ ಪಿ.ಸಿ., ಪ್ರಥಮ ವಾಣಿಜ್ಯ ವಿಭಾಗ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದಿಂದ ಸಂಜು ಪಿ.ಟಿ. ಮತ್ತು ಕಾವ್ಯ ವೈ.ಎಸ್. ಆಯ್ಕೆಯಾದರು.
ಪ್ರಥಮ ವಿಜ್ಞಾನ ವಿಭಾಗದಿಂದ ಮೊಹಮ್ಮದ್ ಹಿಷನ್ ಕೆ.ಎಸ್. ಮತ್ತು ಫ್ಲೆವಿಯ ಅಗ್ನಿಸ್ ಸಿ.ಎಫ್, ದ್ವಿತೀಯ ವಿಜ್ಞಾನ ವಿಭಾಗದಿಂದ ರಕ್ಷಿತಾ ಎಂ.ಎ ಆಯ್ಕೆಗೊಂಡರು.
ನಂತರ ನಡೆದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕಾವ್ಯ ವೈ.ಎಸ್, ಜಂಟಿ ಕಾರ್ಯದರ್ಶಿಗಳಾಗಿ ಸಂಜು ಪಿ. ಟಿ. ಮತ್ತು ದ್ವಿತೀಯ ವಿಜ್ಞಾನ ವಿಭಾಗದ ರಕ್ಷಿತಾ ಅವಿರೋಧವಾಗಿ ಆಯ್ಕೆಯಾದರು.
ಕ್ರೀಡಾ ಕಾರ್ಯದರ್ಶಿಯಾಗಿ ಬೆನಿನ್ ಹಚ್.ಜಿ, ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆಶಿಕಾ ಟಿ.ಎನ್ ಆಯ್ಕೆಗೊಂಡರು.
ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.