ಲAಡನ್, ಜು. ೧೩: ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ೨೧೨ ವರ್ಷಗಳ ಇತಿಹಾಸದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಅಭೂತಪೂರ್ವ ಸಾಧನೆ ಮಾಡಿದೆ.

ಸೋಮವಾರ ಪೂರ್ಣಗೊಂಡ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಆತಿಥೇಯ ಇಂಗ್ಲೆAಡ್ ವಿರುದ್ಧ ೨೭೦ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ‘ಕ್ರಿಕೆಟ್‌ನ ಕಾಶಿ’ ಎಂದೇ ಪ್ರಖ್ಯಾತಿ ಪಡೆದಿರುವ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದ ವಿಶ್ವದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಪ್ರಥಮ ಇನ್ನಿಂಗ್ಸ್ನಲ್ಲಿ ೫ ವಿಕೆಟ್ ಗಳಿಸಿದ ಮಧ್ಯಮ ವೇಗದ ಬೌಲರ್ ಕ್ರಾಂತಿ ಗೌಡ್ ಮತ್ತು ದ್ವಿತೀಯ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ ಯಾಸ್ತಿಕಾ ಭಾಟಿಯಾ ಲಾರ್ಡ್ಸ್ನ ಹಾನರ್ಸ್ ಬೋರ್ಡ್ನಲ್ಲಿ ಸ್ಥಾನ ಗಳಿಸುವ ಮೂಲಕ ಈ ಗೆಲುವನ್ನು ಮತ್ತಷ್ಟು ಸ್ಮರಣೀಯವಾಗಿಸಿದ್ದಾರೆ. ಪಂದ್ಯದಲ್ಲಿ ಒಟ್ಟಾರೆ ೭ ವಿಕೆಟ್ ಪಡೆದು ಮಿಂಚಿದ ಕ್ರಾಂತಿ ಗೌಡ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಭಾರತ, ಮೊದಲ ಇನ್ನಿಂಗ್ಸ್ನಲ್ಲಿ ೨೮೫ ರನ್ ಗಳಿಸಿತು. ಉಪನಾಯಕಿ ಸ್ಮೃತಿ ಮಂಧಾನ (೮೩), ನಾಯಕಿ ಹರ್ಮನ್‌ಪ್ರೀತ್ ಕೌರ್ (೫೮) ಮತ್ತು ರಿಚಾ ಘೋಷ್ (೫೭) ಅರ್ಧಶತಕಗಳ ಕೊಡುಗೆ ನೀಡಿದರು. ಇಂಗ್ಲೆAಡ್ ತಂಡವನ್ನು ಕೇವಲ ೧೭೦ ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ೧೧೫ ರನ್‌ಗಳ ಮುನ್ನಡೆ ಪಡೆಯಿತು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಎಡಗೈ ಬ್ಯಾಟರ್ ಯಾಸ್ತಿಕಾ ಭಾಟಿಯಾ ಆಸರೆಯಾದರು. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಅವರು ೧೫೮ ಎಸೆತಗಳಲ್ಲಿ ೧೧೩ ರನ್ ಗಳಿಸುವ ಮೂಲಕ ಚೊಚ್ಚಲ ಟೆಸ್ಟ್ ಶತಕ ಪೂರೈಸಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿ, ಗೌರವ ಫಲಕದಲ್ಲಿ (ಊoಟಿouಡಿs ಃoಚಿಡಿಜ) ಸ್ಥಾನ ಪಡೆದ ಮೊದಲ ಮಹಿಳಾ ಬ್ಯಾಟರ್ ಎಂಬ ಇತಿಹಾಸ ನಿರ್ಮಿಸಿದರು. ಅವರಿಗೆ ಸಾಥ್ ನೀಡಿದ ಸ್ಮೃತಿ ಮಂಧಾನ ೭೦ ರನ್ ಗಳಿಸಿದರೆ, ರಿಚಾ ಘೋಷ್ ಅಜೇಯ ೫೦ ರನ್ ಸಿಡಿಸಿದರು. ಇಂಗ್ಲೆAಡ್ ಪರ ಸೋಫಿ ಎಕ್ಲೆಸ್ಟನ್ ೫ ವಿಕೆಟ್ ಪಡೆದರು. ಭಾರತವು ತನ್ನ ಎರಡನೇ ಇನ್ನಿಂಗ್ಸ್ ಅನ್ನು ೭ ವಿಕೆಟ್‌ಗೆ ೩೪೧ ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡು, ಆತಿಥೇಯರಿಗೆ ೪೫೭ ರನ್‌ಗಳ ಬೃಹತ್ ಗುರಿ ನೀಡಿತು. ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆAಡ್ ೧೮೬ ಕ್ಕೆ ಆಲ್ ಔಟ್ ಆಯಿತು.