ಮಡಿಕೇರಿ, ಜು. ೧೩: ರಜೆ ಮೇಲೆ ತೆರಳಿದ ಆಡಳಿತಾಧಿಕಾರಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಶಾಂತಳ್ಳಿ ಹೋಬಳಿಯ ನಾಡಕಚೇರಿಯ ಗ್ರಾಮ ಆಡಳಿತಾಧಿಕಾರಿ ಸಣ್ಣರುದ್ರಪ್ಪ ವಿ ಚಿಕೋಪ್ಪ ಅಮಾನತುಗೊಂಡ ಅಧಿಕಾರಿ. ಮೇ ೧೯ ರಿಂದ ೩೦ರವರೆಗೆ ವೈಯಕ್ತಿಕ ಸಮಸ್ಯೆ ನಿಮಿತ್ತ ರಜೆ ಮೇರೆ ತೆರಳಿದ್ದು, ಜೂನ್ ೧ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು. ಸಕಾಲಕ್ಕೆ ಹಾಜರಾಗದ ಹಿನ್ನೆಲೆ ಸಿ ಮತ್ತು ಡಿ ಲ್ಯಾಂಡ್ ಸೇರಿದಂತೆ ಪ್ರಮುಖ ಸಭೆಗಳಿಗೂ ಹಾಜರಾಗಿಲ್ಲ. ಇದರಿಂದ ತೊಂದರೆ ಉಂಟಾಗಿದೆ. ಈ ಸಂಬAಧ ಕಾರಣ ಕೇಳಿ ರವಾನಿಸಿದ್ದ ನೋಟಿಸ್‌ಗೂ ಸಮಾಜಾಯಿಷಿಕೆ ನೀಡಿಲ್ಲದ ಕಾರಣದಿಂದ ಅಧಿಕಾರಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕಚೇರಿ ಮುಖ್ಯಸ್ಥರ ಪೂರ್ವಾನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಹಾಗೂ ಅವರ ಸ್ಥಾನವನ್ನು ಚೆನ್ನಯ್ಯನಕೋಟೆ ವೃತ್ತದಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಬದಲಾಯಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.